ಮಧುಗಿರಿ: ನಿರ್ಮಾಣ ಆದ್ರು ಹೈಟೆಕ್ ಅಂಗನವಾಡಿಗೆ ಉದ್ಘಾಟನೆ ಭಾಗ್ಯ ಇಲ್ಲ..!

  ಹೈಟೆಕ್‌ ಅಂಗನವಾಡಿ ಕಟ್ಟಡ
ಹೈಟೆಕ್‌ ಅಂಗನವಾಡಿ ಕಟ್ಟಡ
ತುಮಕೂರು

ಮಧುಗಿರಿ:

ಮಧುಗಿರಿ ತಾಲೂಕು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಗೋಂಧಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿ ಒಂದು ವರ್ಷ ಆದರೂ ಕೂಡ ಉದ್ಘಾಟನೆ ಆಗಿಲ್ಲ. ಹೌದು ಸುಸಜ್ಜಿತವಾದ ಹೈಟೆಕ್‌ ಅಂಗನವಾಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಉದ್ಘಾಟನೆ ಆಗದೇ ಇರೋದರಿಂದ  ಪಾಳು ಬಿದ್ದ ಕಟ್ಟಡದಲ್ಲೇ ಅಂಗನವಾಡಿ ಮಕ್ಕಳಿದ್ದಾರೆ.

ರಾಜ್ಯ ಹೆದ್ದಾರಿ ಪಕ್ಕದಲ್ಲೇ ಚೆಂದುಳ್ಳಿಯಂತೆ ಹೈಟೆಕ್‌ ಅಂಗನವಾಡಿ ಕಟ್ಟಡ ತಲೆ ಎತ್ತಿದೆ. ಆದರೆ ಒಂದು ವರ್ಷ ಆದರೂ ಕೂಡ ಉದ್ಘಾಟನೆ ಮಾತ್ರ ಮಾಡ್ತಾ ಇಲ್ಲ. ಇದರಿಂದ ಅಂಗನವಾಡಿ ಅವರಣದಲ್ಲೇ ಇರೋ ಪಾಳು ಬಿದ್ದ ಕಟ್ಟಡದಲ್ಲಿಯೇ ಅಂಗನವಾಡಿ ನಡೆಸಲಾಗ್ತಿದೆ. ಕಟ್ಟಡ ಆಗಲೋ ಈಗಲೋ ಬೀಳುವ ಹಂತದಲ್ಲಿದ್ದು ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ.

ಪಾಳು ಬಿದ್ದ ಅಂಗನವಾಡಿಗೆ ಸರಿಯಾದ ಭದ್ರತೆ ಇಲ್ಲ. ಎರಡು ಬಾರಿ ಅಂಗನವಾಡಿಯಲ್ಲಿದ್ದ ವಸ್ತುಗಳ ಕಳ್ಳತನ ಕೂಡ ಆಗಿತ್ತು. ಇಷ್ಟಾದರೂ ಕೂಡ ಅಧಿಕಾರಿಗಳು ಹೊಸ ಕಟ್ಟಡವನ್ನು ಉದ್ಘಾಟನೆ ಮಾಡುವ ಗೋಜಿಗೆ ಹೋಗ್ತಾ ಇಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹೈಟೆಕ್‌ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಕ್ಕಳ ಜೀವವನ್ನು ಉಳಿಸಬೇಕಿದೆ.

Author:

...
Editor

ManyaSoft Admin

Ads in Post
share
No Reviews