ಕ್ರಿಕೆಟ್ : ಐಪಿಎಲ್ 2025 ರ 18ನೇ ಆವೃತ್ತಿಯು ಕುತೂಹಲಕರ ಘಟ್ಟಕ್ಕೆ ತಲುಪಿದೆ. ಏಕನಾ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ಸನ್ ರೈಸರ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಹೈದರಾಬಾದ್ ಎದುರು, ಲಕ್ನೋ ತಂಡದ ಆರಂಭಿಕ ಆಟಗಾರರು ಉತ್ತಮ ಆರಂಭ ನೀಡಿದರು. ಮಿಚೆಲ್ ಮಾರ್ಷ್ ಅವರು 39 ಎಸೆತಗಳಲ್ಲಿ 65 ರನ್, ಮತ್ತು ಏಡನ್ ಮಾರ್ಕ್ರಮ್ ಅವರು 38 ಎಸೆತಗಳಲ್ಲಿ 61 ರನ್ ಗಳಿಸಿ ಮೊದಲ ವಿಕೆಟ್ಗೆ 115 ರನ್ ಗಳ ಭರ್ಜರಿ ಜೊತೆಯಾಟವಾಡಿದರು. ಆದರೂ, ಮಧ್ಯದ ಮತ್ತು ಕೊನೆಯ ಓವರ್ಗಳಲ್ಲಿ ಹೈದರಾಬಾದ್ ಬೌಲರ್ಗಳು ಹಿನ್ನಡೆಯಿಂದ ಬರುವುದು ತಡೆದರು. ನಿಕೋಲಸ್ ಪೂರೆನ್ ಅವರು 26 ಎಸೆತಗಳಲ್ಲಿ 45 ರನ್ ಗಳಿಸಿ ತಂಡದ ಮೊತ್ತವನ್ನು 205 ರನ್ಗೆ ಕರೆದೊಯ್ದರು.
ಸನ್ ರೈಸರ್ಸ್ ಪರ ಅಭಿಷೇಕ್ ಶರ್ಮಾ ಅವರು ಕೇವಲ 20 ಎಸೆತಗಳಲ್ಲಿ 6 ಸಿಕ್ಸರ್ಗಳು ಮತ್ತು 4 ಬೌಂಡರಿಗಳ ಮೂಲಕ 59 ರನ್ ಸಿಡಿಸಿದರು. ಇವರ ಜೊತೆಗೆ ಕ್ಲಾಸೆನ್ ಅವರು 47 ರನ್, ಇಶಾನ್ ಕಿಶನ್ 35 ರನ್, ಮತ್ತು ಕಮಿಂಡು ಮೆಂಡಿಸ್ 32 ರನ್ ಗಳಿಸಿ ನೆರವಾಯಿದರು. ಇನ್ನು ಹೈದರಾಬಾದ್ ತಂಡವು 18.2 ಓವರ್ಗಳಲ್ಲಿ 206 ರನ್ ಗಳಿಸಿ 6 ವಿಕೆಟ್ಗಳಿಂದ ಗೆಲುವು ಸಾಧಿಸಿತು.
ಈ ಸೋಲಿನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ಸ್ ಅವಕಾಶಗಳನ್ನು ಕಳೆದುಕೊಂಡಿದೆ. ಇನ್ನೊಂದು ಕಡೆ, ಸನ್ ರೈಸರ್ಸ್ ತಮ್ಮ ಪ್ಲೇಆಫ್ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಸನ್ ರೈಸರ್ಸ್ ಪರ ಹರ್ಷಲ್ ಪಟೇಲ್, ಹರ್ಷ್ ದುಬೆ, ನಿತೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದು ಮಿಂಚಿದರು. ಮಾಲಿಂಗ ಅವರ ದಾಳಿ 2 ವಿಕೆಟ್ ಗಳೊಂದಿಗೆ ಪರಿಣಾಮಕಾರಿಯಾಗಿತ್ತು. ಲಕ್ನೋ ಪರ ದಿಗ್ವೇಶ್ ರಾಠಿ 2 ವಿಕೆಟ್, ವಿಲ್ ಓ’ರೂರ್ಕ್ ಮತ್ತು ಶಾರ್ದೂಲ್ ತಲಾ ಒಂದು ವಿಕೆಟ್ ಪಡೆದುಕೊಂಡರು.