ತುಮಕೂರು : ತುಮಕೂರು ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರೋ ಪೋಕ್ಸೋ ಪ್ರಕರಣಗಳನ್ನು ಜಿಲ್ಲಾ ಘನ ನ್ಯಾಯಾಲಯ ಇತ್ಯರ್ಥ ಮಾಡ್ತಾ ಇದ್ದು ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಆಗ್ತಾ ಇದೆ… ಇವತ್ತು ಕೂಡ ಪೋಕ್ಸೋ ಪ್ರಕರಣವೊಂದನ್ನ ಕೈಗೆತ್ತಿಕೊಂಡಿರೋ ನ್ಯಾಯಾಲಯ ಆರೋಪಿಗೆ ಹಾಗೂ ದೌರ್ಜನ್ಯಕ್ಕೆ ಕುಮ್ಮಕ್ಕು ಕೊಟ್ಟವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ದಂಡವನ್ನು ವಿಧಿಸಿ ತುಮಕೂರು ನ್ಯಾಯಾಲಯ ತೀರ್ಪು ನೀಡಿದೆ.
ನೊಂದ ಅಪ್ರಾಪ್ತ ಬಾಲಕಿಯ ಸ್ವಂತ ಚಿಕ್ಕಮ್ಮ ಆಗಿರೋ ರತ್ನಮ್ಮ ಹಾಗೂ ಈಕೆಯ ತಾಯಿ ಗಂಗಮ್ಮ ಮನೆಯಲ್ಲಿ ಯಾರು ಇಲ್ಲದಿದ್ದಾಗ ಬಾಲಕಿಗೆ ಸುಳ್ಳು ಹೇಳಿ ಮಡಕಶಿರಾಗೆ ಕರೆದುಕೊಂಡು ಹೋಗಿ, ಅಲ್ಲಿಂದ ಪೆನುಗೊಂಡ, ಬಳಿಕ ವಾರಗಲ್‌ನ ಶೆಡ್‌ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿ ಆರೋಪಿ ಅರುಣ್ ಕುಮಾರ್‌ನನ್ನು ಶೆಡ್ ಒಳಗೆ ಕಳುಹಿಸಿದ್ದಾರೆ. ಆರೋಪಿ ಅರುಣ್ ಕುಮಾರ್ ಅಪ್ರಾಪ್ತ ಬಾಲಕಿ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ನೊಂದ ಬಾಲಕಿಯ ತಾಯಿ ಪಾವಗಡ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದೂರು ದಾಖಲಿಸಿದ್ರು.
ಪಾವಗಡ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಇನ್‌ಸ್ಟೆಕ್ಟರ್ ಲಕ್ಷ್ಮೀಕಾಂತ್ ಆರೋಪಿಗಳ ವಿರುದ್ಧ ದೋಷರೋಪಟ್ಟಿಯನ್ನು ಸಲ್ಲಿಸಿದ್ರು. ಸುರ್ಧೀರ್ಘ ವಾದ ಮಂಡಿಸಿದ ನ್ಯಾಯಧೀಶೆ ಆಶಾ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ರು. ಅದ್ರಂತೆ ಪೋಕ್ಸೋ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ದಂಡವನ್ನು ಜಿಲ್ಲಾ ನ್ಯಾಯಾಲಯ ಪ್ರಕಟಿಸಿದೆ.
ಕಳೆದ ಒಂದೂವರೆ ಎರಡು ತಿಂಗಳಿನಿಂದ ತುಮಕೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಗಳ ತೀರ್ಪನ್ನ ನ್ಯಾಯಾಲಯ ಪ್ರಕಟಿಸ್ತಾ ಇದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನ ವಿಧಿಸುವ ಮೂಲಕ, ಅಪರಾಧ ಕೃತ್ಯಗಳಿಗೆ ಕೈ ಹಾಕುವ ಆರೋಪಿಗಳಿಗೆ ಎಚ್ಚರಿಕೆಯ ಗಂಟೆಯನ್ನ ನೀಡಲಾಗ್ತಿದೆ.