ಮಂಡ್ಯ : ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದ ಚಿರತೆ..!

ಸಿಸಿ ಕ್ಯಾಮರಾದಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿರುವುದು.
ಸಿಸಿ ಕ್ಯಾಮರಾದಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿರುವುದು.
ಮಂಡ್ಯ

ಮಂಡ್ಯ:

ಚಿರತೆಯೊಂದು ತಡರಾತ್ರಿ ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿರತೆಯೊಂದು ತಡರಾತ್ರಿ ತೋಟದ ಮನೆಗೆ ನುಗ್ಗಿ ತೋಟದ ಮನೆಯಲ್ಲಿದ್ದ ನಾಟಿಕೋಳಿಗಳನ್ನು ಹೊತ್ತೊಯ್ದಿದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಂದ್ರಶೇಖರ್‌ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದೆ. ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಉಪಟಳ ಜಾಸ್ತಿಯಾಗಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೀಡಾಗಿದ್ದು, ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಘಟನೆ ಕುರಿತು ಅರಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Editor

ManyaSoft Admin

share
No Reviews