ಕೊರಟಗೆರೆ : ಪ್ರಜಾಶಕ್ತಿ ವರದಿ ಬೆನ್ನಲ್ಲೇ ಸಮಸ್ಯೆ ಆಲಿಸಲು ಓಡೋಡಿ ಬಂದ ಡಿಸಿ..!

ಶುದ್ದ ಕುಡಿಯುವ ನೀರಿನ ಘಟಕ, ಮೋರಗಾನಹಳ್ಳಿ
ಶುದ್ದ ಕುಡಿಯುವ ನೀರಿನ ಘಟಕ, ಮೋರಗಾನಹಳ್ಳಿ
ತುಮಕೂರು

ಕೊರಟಗೆರೆ:

ಪ್ರಜಾಶಕ್ತಿ ಮಾಧ್ಯಮ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡುವ ಕೆಲಸ ಮಾಡ್ತಾ ಇದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಮೊರಗಾನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಕೆಟ್ಟು ಹೋಗಿ 2 ವರ್ಷವಾಗಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾತ್ರ ಮಾಡ್ತಾ ಇರಲಿಲ್ಲ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಶುದ್ದ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ ಶೀರ್ಷಿಕೆಯಡಿಯಲ್ಲಿ ನಿನ್ನೆ ವರದಿ ಮಾಡಿತ್ತು. ವರದಿ ಮಾಡಿ ಕೆಲವೇ ಗಂಟೆಗಳಲ್ಲಿ ಡಿಸಿ ಶುಭಕಲ್ಯಾಣ್‌ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಸಮಸ್ಯೆಯನ್ನು ಆಲಿಸಿದ್ದಾರೆ.

ಮೋರಗಾನಹಳ್ಳಿ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳಿದ್ದು, ಕುಡಿಯುವ ನೀರಿಗಾಗಿ ನಿತ್ಯ ಊರೂರು ಅಲೆಯುವ ಸ್ಥಿತಿ ಇತ್ತು. ನೀರು ಸಿಗದೇ ಕೊನೆಗೆ ಪ್ಲೋರೆಡ್‌ ಯುಕ್ತ ನೀರನ್ನೇ ಕುಡಿಯುವ ದುಸ್ಥಿತಿ ಎದುರಾಗಿತ್ತು. ಇದರಿಂದಾಗಿ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಪ್ರಜಾಶಕ್ತಿ ಟಿವಿಯಲ್ಲಿ ಸುದ್ದಿ ಬಿತ್ತಾರವಾದ ಮರುದಿನವೇ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ, ಗ್ರಾಮೀಣ ಮತ್ತು ಕುಡಿಯುವ ನೀರು ಎಇಇ ಕಾಂತರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಶುದ್ದ ಕುಡಿಯುವ ನೀರಿನ ಘಟಕ ತೆರೆಸಿದ್ದಾರೆ. ಬಳಿಕ ಸ್ಥಗಿತವಾಗಿದ್ದ ಘಟಕಕ್ಕೆ ಮರುಚಾಲನೆ ನೀಡಿದ್ದು, ಪ್ರಜಾಶಕ್ತಿ ಟಿವಿಗೆ ಜನರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Author:

...
Editor

ManyaSoft Admin

share
No Reviews