ಕೊರಟಗೆರೆ : ಕೊರಟಗೆರೆಯಲ್ಲಿ ಮತ್ತೆ ಆಲೆಮನೆ ವೈಭವ | ನಾಟಿ ಬೆಲ್ಲ ಕೊಳ್ಳಲು ಮುಗಿಬಿದ್ದ ಜನ

ಕೊರಟಗೆರೆ:

ತೆಂಗಿನಗರಿ, ಕಬ್ಬಿನ ಸೋಗೆಯಿಂದ ಚಪ್ಪರ ನಿರ್ಮಿಸಿ. ಚಪ್ಪರದ ಅಡಿಯಲ್ಲಿ ದೊಡ್ಡದೊಡ್ಡ  ಬೆಲ್ಲದ ಕೊಪ್ಪರಿಗೆ ಸ್ಥಾಪನೆ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲದ ಸುಂಗದದ ಪರಿಮಳ. ಇದು ಆಲೆಮನೆಯಲ್ಲಿ ಕಂಡುಬಂದ ಅಪರೂಪದ ದೃಶ್ಯ. ಹೌದು ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮ ಪಂಚಾಯ್ತಿಯ ಸದಸ್ಯ ಮತ್ತು ರೈತ ವೆಂಕಟಾರೆಡ್ಡಿ ಅವರು ಆಲೆಮನೆಯನ್ನು ಪುನರಾಂಭಿಸಿರುವ ಸ್ಟೋರಿ ಇದು.

ಆಲೆಮನೆ ಎಂದರೇ ಸಾಕು ಮನಸ್ಸು ಹಿಂದಕ್ಕೆ ಓಡುವ ಕಾಲ ಇತ್ತು. ಎಲ್ಲಿ ನೋಡಿದರೆಲ್ಲಿ ಹೊಲಗದ್ದೆ ಬಯಲುಗಳೆಲ್ಲವೂ ಕಬ್ಬು ಹೊತ್ತು ನಿಂತಿರುತ್ತಿದ್ದ ಕಾಲವಿತ್ತು. ಈಗ ಅದು ಮರೆಯಾಗಿದ್ದು, ರೈತರು ವಾಣಿಜ್ಯ ಬೆಳೆಗಳಿಗೆ ಮಾರು ಹೋಗಿದ್ದಾರೆ. ಹೀಗಾಗಿ ಕೊರಟಗೆರೆಯಲ್ಲಿ ಕಬ್ಬಿನ ಕೃಷಿ ಮತ್ತು ಆಲೆಮನೆಯ ನೆನಪು ಅಪರೂಪ ಆಗಿಬಿಟ್ಟಿತ್ತು. ಇದೀಗ ಮತ್ತೆ ಆಲೆಮನೆ ಮತ್ತೆ ಆರಂಭಿಸಿದ್ದು, ನಾಟಿ ಬೆಲ್ಲ ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆಲೆಮನೆಯಲ್ಲಿ ಬರುವ ಕಬ್ಬಿನ ರಸ, ಕಬ್ಬಿನ ರಸದಿಂದ ಕೊಪ್ಪರಿಗೆಯಲ್ಲಿ ಸ್ವಲ್ಪ ಹೋತ್ತು ಬೇಯಿಸಿದ ಮೇಲೆ ತಯಾರಾಗುವ ಕಾಕಂಭಿ ಮತ್ತು ಅಡುಗೆ ಇಳಿದ ಮೇಲೆ ಸುಣ್ಣಹಾಕುವ ಮುಂಚೆ ತಿನ್ನುವ ಬಿಸಿಬೆಲ್ಲವು ಆಲೆಮನೆಯ ವಿಶೇಷತೆಯನ್ನು ಒಳಗೊಂಡಿದೆ.

ಬೈಚಾಪುರ ಗ್ರಾಮದ ರೈತ ವೆಂಕಟಾರೆಡ್ಡಿಯ ಆಲೆಮನೆಯಲ್ಲಿ ಯಾವುದೇ ಕೆಮಿಕಲ್ ಬಳಸದೇ ನಾಟಿ ಬೆಲ್ಲವನ್ನು ತಯಾರು ಮಾಡುತ್ತಿದ್ದಾರೇ. ನಾಟಿಬೆಲ್ಲಕ್ಕೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿ ಆಲೆಮನೆಗೆ ಬಂದು ಖರೀದಿ ಮಾಡುತ್ತಿದ್ದಾರೇ. ಇದರಿಂದ ಕಬ್ಬಿನ ಗದ್ದೆ ಮತ್ತು ಆಲೆಮನೆ ಮುಚ್ಚುವ ಆಲೋಚನೆ ಮಾಡಿದ ರೈತ ಬೆಲ್ಲದ ಬೇಡಿಕೆಯನ್ನು ನೋಡಿ ಮತ್ತೇ ಉಳಿಸಿಕೊಳ್ಳುವ ಆಲೋಚನೆ ಮಾಡುತ್ತಿದ್ದಾರೆ.

ತಾತನ ಕಾಲದಲ್ಲಿ ಸತತ 3 ತಿಂಗಳು ಆಲೆಮನೆಯ ಕೆಲಸ ಮಾಡಲಾಗುತ್ತಿತ್ತು. ನಾನು ಮತ್ತೇ 3ವರ್ಷದಿಂದ ಮತ್ತೇ ಆರಂಭ ಮಾಡಿದ್ದೇನೆ. 1ಕೆಜಿ ನಾಟಿಬೆಲ್ಲಕ್ಕೆ 100 ರೂಪಾಯಿಯಂತೆ ಗ್ರಾಹಕರು ನಮ್ಮ ಆಲೆಮನೆ ಹತ್ತಿರನೇ ಬಂದು ಬೆಲ್ಲ ಖರೀದಿ ಮಾಡಿ ಹೋಗ್ತಾ ಇದ್ದಾರೆ. ಆಲೆಮನೆಯ ಸಂಭ್ರಮ ಮತ್ತೇ ನಮ್ಮ ಹಳ್ಳಿಗಳಲ್ಲಿ ಸಿಗಬೇಕಾದರೆ ಸರ್ಕಾರದ ಸಹಾಯಹಸ್ತ  ಅತಿಮುಖ್ಯ ಎಂದು ರೈತ ವೆಂಕಟಾರೆಡ್ಡಿ ಹೇಳಿದರು.

ನಮ್ಮ ಹಿರಿಯರ ಕಾಲದಲ್ಲಿ ಊರಿಗೊಂದು ಆಲೆಮನೆ ಇತ್ತು. ದಿನ ಕಳೆದಂತೆ ಆಲೆಮನೆಯ ನೆನಪು ಕಣ್ಮರೇ ಆಗುತ್ತೀದೆ. ಕಾರ್ಮಿಕರ ಕೊರತೆಯಿಂದ ಕಬ್ಬು ಬೆಳೆಸಿ ಆಲೆಮನೆ ಕೆಲಸ ಮಾಡಿಸುವುದೇ ರೈತನಿಗೆ ಹರಸಾಹಸ. ಕೇಂದ್ರ ಮತ್ತು ರಾಜ್ಯ ಸರಕಾರ ಕಬ್ಬುಬೆಳೆ ಮತ್ತು ಆಲೆಮನೆಯ ವಿಶೇಷ ಪ್ರೋತ್ಸಾಹ ನೀಡಬೇಕಿದೆ ಎಂದು ರೈತ ಲಕ್ಷ್ಮೀಪತಯ್ಯ ಆಗ್ರಹ ಮಾಡಿದರು.

ಒಟ್ಟಿನಲ್ಲಿ ಆಲೆಮನೆ ವೈಭೋಗ ಮತ್ತೆ ಕೊರಟಗೆರೆಯಲ್ಲಿ ಮರುಕಳಿಸಿದ್ದು, ಬೆಲ್ಲ ತಯಾರಿ ಹಾಗೂ ಬೆಲ್ಲವನ್ನು ಖರೀದಿಸಲು ಜನರಂಥೂ ಮುಗಿಬೀಳ್ತಾ ಇದ್ದಾರೆ.

 

Author:

...
Editor

ManyaSoft Admin

Ads in Post
share
No Reviews