RECIPES :
ದಹಿ ವಡಾವನ್ನು ಪಂಜಾಬಿಯಲ್ಲಿ ದಹಿ ಭಲ್ಲಾ ಎಂದೂ ಕರೆಯುತ್ತಾರೆ. ಇದು ಭಾರತದಲ್ಲಿ ಬಹಳ ಜನಪ್ರಿಯವಾದ ಬೀದಿ ಆಹಾರ ಚಾಟ್ ಆಗಿದೆ. ಮನೆಯಲ್ಲೇ ಅತೀ ಸುಲಭವಾಗಿ ದಹಿ ವಡಾ ಮಾಡಲು ಬೇಕಾಗುವ ಪದಾರ್ಥಗಳೆಂದರೆ :
- ಉದ್ದಿನ ಬೇಳೆ – 1 ಕಪ್
- ಹಸಿರು ಮೆಣಸಿನಕಾಯಿ – 2
- ಶುಂಠಿ – 1 ಇಂಚು
- ಜೀರಿಗೆ – 1 ಟೀ ಸ್ಪೂನ್
- ಉಪ್ಪು – ರುಚಿಗೆ ತಕ್ಕಷ್ಟು
- ನೀರು – ಅಗತ್ಯವಿರುವಷ್ಟು
- ಎಣ್ಣೆ – ಡೀಪ್ ಫ್ರೈಗ
- ಮೊಸರು – 2 ಕಪ್
- ಉಪ್ಪು – ½ ಸ್ಪೂನ್
- ಸಕ್ಕರೆ – 1 ಟೀ ಸ್ಪೂನ್
- ಕರಿಬೇವು – 1 ಟೀ ಸ್ಪೂನ್
- ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
- ಸಾದಾ ಬೂಂದಿ – 2 ಟೇಬಲ್ ಸ್ಪೂನ್
- ಮೊಸರು– ಹೆಚ್ಚುವರಿ ಬೇಕಾದಷ್ಟು
- ಮೆಣಸಿನ ಪುಡಿ – ½ ಟೀ ಸ್ಪೂನ್
- ಜೀರಿಗೆ ಪುಡಿ – ½ ಟೀ ಸ್ಪೂನ್
ದಹಿ ವಡಾವನ್ನು ತಯಾರಿಸುವ ವಿಧಾನ :
ಉದ್ದಿನ ಬೇಳೆಯನ್ನು 4-5 ಗಂಟೆಗಳ ಕಾಲ ನೆನೆಸಿಟ್ಟು. ನಂತರ ಉದ್ದಿನ ಬೆಳೆಯನ್ನು ಮಿಕ್ಸರ್ ಅಥವಾ ಗ್ರೈಂಡರ್‌ನಲ್ಲಿ ರುಬ್ಬಿ ಅದಕ್ಕೆ ಹಸಿರು ಮೆಣಸು, ಶುಂಠಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಅದನ್ನು ಹಸ್ತದಿಂದ ಅಥವಾ ಚಮಚದಿಂದ ತಿರುಗಿಸಿ ತಯಾರಿಸಿದ ವಡಾಗಳನ್ನು ಬಿಸಿಯಾದ ಎಣ್ಣೆಯಲ್ಲಿ ಕರಿದಿಟ್ಟು, ಬಣ್ಣ ಬದಲಾದರೆ ತೆಗೆಯಿರಿ. ಕರಿದ ವಡಾಗಳನ್ನು 5 ನಿಮಿಷ ನೀರಿನಲ್ಲಿ ಮುಳುಗಿಸಿ, ನಂತರ ಹಿಂಬದಿಯಿಂದ ಒತ್ತಿ ನೀರನ್ನು ಹೀರಿಸಿ.
ನಂತರ ದಹಿ ಮಿಶ್ರಣ ತಯಾರಿಸಿಕೊಳ್ಳಬೇಕು
ಮೊಸರಿನಲ್ಲಿ ಸ್ವಲ್ಪ ನೀರು ಅಥವಾ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕಲಸಿ. ತಯಾರಿಸಿದ ಮೊಸರಿನಲ್ಲಿ ವಡಾಗಳನ್ನು ಹಾಕಿ 15-20 ನಿಮಿಷ ಬಿಟ್ಟು ಬಿಡಿ, ಇದು ನಯವಾಗಿ ಹೀರುವಂತೆ ಮಾಡುತ್ತದೆ. ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಮೆಣಸಿನ ಪುಡಿ, ಕರಿಬೇವು, ಬೂಂದಿ ಸೇರಿಸಿ ಅಲಂಕಾರ ಮಾಡಿ. ತಣ್ಣಗೆ ಅಥವಾ ಗರಂ ಗರಂ ವಡಾಗಳನ್ನು ದಹಿಯೊಡನೆ ಕೊಟ್ಟರೆ ಸವಿಯಲು ಸಿದ್ದ.