ಮದ್ದೂರು ವಡೆ ಕರ್ನಾಟಕದ ಜನಪ್ರಿಯ ತಿಂಡಿಯಾಗಿದೆ. ಇದು ಬೆಂಗಳೂರಿನ ನೈರುತ್ಯಕ್ಕೆ 85ಕಿ.ಮೀ. ದೂರದಲ್ಲಿರುವ ಮದ್ದೂರು ಎಂಬ ಊರಿನಲ್ಲಿ ಮೊದಲು ಬೆಳಕಿಗೆ ಬಂದ ಕಾರಣ ಊರಿನ ಹೆಸರಿನಿಂದ ಹೆಸರುವಾಸಿಯಾಗಿದೆ.
ಮದ್ದೂರು ವಡೆ ಮಾಡಲು ಬೇಕಾದ ಪದಾರ್ಥಗಳು̇
*ಅಕ್ಕಿ ಹಿಟ್ಟು
*ರವೆ
*ಮೈದಾ ಹಿಟ್ಟು
*ಈರುಳ್ಳಿ
*ಕೊತ್ತಂಬರಿ ಸೊಪ್ಪು
*ಹಸಿಮೆಣಸಿನಕಾಯಿ
ಮದ್ದೂರು ವಡೆ ಮಾಡುವ ವಿಧಾನ
ಅಕ್ಕಿ ಹಿಟ್ಟು, ರವೆ ಮತ್ತು ಮೈದಾ ಈ ಪದಾರ್ಥಗಳನ್ನು ನೀರಿನೋದಿಗೆ ಕಲಸಿ ರುಚಿಗಾಗಿ ಕಯ್ಯರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳೊಂದಿಗೆ ಬೆರೆಸಿ ಬೆಚ್ಚಗಿನ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ ಉಪ್ಪು ಮತ್ತು ಇಂಗು ಸಹ ಸೇರಿಸಿ. ತಯಾರಿಸಲಾದ ಹಿಟ್ಟನ್ನು ಕುದಿಯುವ ಎಣ್ಣೆಯಲ್ಲಿ ಕಂದು ಬಣ್ನಕ್ಕೆ ಬರುವವರೆಗೆ ಕರಿಯರಿ. ಬಾಣಲೆಯಿಂದ ತೆಗೆದು ಎಣ್ಣೆ ಸೋಸಿದ ನಂತರ ಗರಿಗರಿಯಾದ ಮದ್ದೂರು ವಡೆ ಸವಿಯಲು ಸಿದ್ದವಾಗುತ್ತದೆ. ಸಾಮಾನ್ಯ ಉದ್ದಿನ ವಡೆಗಿಂತ ಮದ್ದೂರು ವಡೆ ಭಿನ್ನವಾಗಿದ್ದು ಸಮತಟ್ಟಾದ, ವೃತ್ತಾಕಾರ ಹೊಂದಿದ್ದು ಮಧ್ಯದಲ್ಲಿ ಯಾವುದೇ ರಂಧ್ರವಿರುವುದಿಲ್ಲ. ಮದ್ದೂರು ವಡೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಕೆಚಪ್/ಸಾಸ್ ಜೊತೆಗೆ ಸವಿಯಬಹುದು.
ಮದ್ದೂರು ವಡೆಯನ್ನು ಖರೀದಿಸಲು ಅತ್ಯುತ್ತöಮ ಸ್ಥಳವೆಂದರೆ ಬೆಂಗಳೂರು ಮತ್ತು ಮೈಸೂರು ನಡುವೆ ಬರುವ ಮದ್ದೂರು ಪಟ್ಟಣ. ಬೆಂಗಳೂರು ಮತ್ತು ಮೈಸೂರು ನಡುವೆ ರೈಲು ಅಥವಾ ರಸ್ತೆಯ ಮೂಲಕ ಪ್ರಯಾಣಿಸುವಾಗ ಮದ್ದೂರಿನಲ್ಲಿ ಮದ್ದೂರು ವಡೆಯನ್ನು ಸ್ಥಳೀಯ ಉಪಹಾರ ಗೃಹ ಅಥವಾ ವ್ಯಾಪಾರಿಗಳಿಂದ ಖರೀದಿಸಿ ಸವಿಯಬಹುದು. ಮದ್ದೂರು ವಡೆಯನ್ನು ಕರ್ನಾಟಕದಾದ್ಯಂತ ಮುಖ್ಯವಾಗಿ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಪ್ರದೇಶಗಳಲ್ಲಿ ಹಲವಾರು ಉಪಹಾರ ಗೃಹಗಳಲ್ಲಿ ಮಾರಾಟ ಮಾಡಲಾಗುತ್ತದೆ.