ಕರ್ನಾಟಕ :‌ ಆಪರೇಷನ್‌ ಸಿಂಧೂರ್‌ | ರಾಜ್ಯದ ಡ್ಯಾಂಗಳಲ್ಲಿ ಹೈ ಅಲರ್ಟ್

ಕರ್ನಾಟಕ :

ಭಾರತ ದೇಶದ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಪ್ರತೀಕಾರವನ್ನು ತೀರಿಸಿಕೊಡಿದೆ. ಸದ್ಯ ಪಾಕಿಸ್ತಾನ ಯುದ್ದದ ಭೀತಿಯನ್ನು ಭಾರತ ದೇಶವು ಎದುರಿಸುತ್ತಿದೆ. ಆಪರೇಷನ್‌ ಸಿಂಧೂರ್‌ ಯಶಸ್ವಿ ಹಿನ್ನಲೆಯಲ್ಲಿ ಭಾರತವು ಎಲ್ಲೆಡೆಯಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರಿಂದಾಗಿ ದೇಶದ ಭದ್ರತೆಯನ್ನು ಕಾಪಾಡಲು ಕರ್ನಾಟಕದ ಡ್ಯಾಂಗಳಲ್ಲಿ ಭದ್ರತೆಯನ್ನು ಬಿಗಿ ಗೊಳಿಸಲಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ ಭದ್ರತೆ ಗೊಳಿಸಲಾಗಿದೆ. ಆಲಮಟ್ಟಿ ಡ್ಯಾಂ ಪ್ರವೇಶ ದ್ವಾರದಿಂದಲೇ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗಿದ್ದು ಬಾರೀ ಗೂಡ್ಸ್‌ ವಾಹನಗಳನ್ನು ನಿಷೇದಿಸಲಾಗಿದೆ. ಓರ್ವ ಡಿವೈಎಸ್‌ಪಿ ನೇತೃತ್ವದಲ್ಲಿ ಒಟ್ಟು86 ಕೆಎಸ್‌ಐಎಸ್‌ಎಫ್‌ ಅಧಿಕಾರಿಗಳಿಂದ ಆಧುನಿಕ ಶಸ್ತ್ರಾಸ್ತ್ರಗಳ ಸಹಿತ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಸಿಸಿ ಕ್ಯಾಮೆರಾ ಕಣ್ಗಾವಲನ್ನು ಇರಿಸಿದೆ. ನಿತ್ಯ 24 ಗಂಟೆಗಳ ಕಾಲ ಮೂರು ಹೊತ್ತಿನಲ್ಲೂ ಭದ್ರತೆ ಇರಲಿದೆ. ಬೋಟ್ ಮೂಲಕ ಡ್ಯಾಂ ಹಿನ್ನೀರಿನಲ್ಲೂ ತಪಾಸಣೆ ಕಟ್ಟೆಚ್ಚರ ವಹಿಸಲಾಗಿದೆ.

ಅದೇ ರೀತಿಯಾಗಿ ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಹೇಮಾವತಿ ಡ್ಯಾಂ ಮೇಲೆ ತೀವ್ರಾ ನಿಗಾ ವಹಿಸಿ ಇಡಲು ಭದ್ರತಾ ಪಡೆಗೆ ಭದ್ರತಾ ಇಲಾಖೆಯಿಂದ ಸೂಚನೆಯನ್ನು ನೀಡಿದ್ದಾರೆ. ಓರ್ವ ಪಿಐ, ಓರ್ವ ಪಿಎಸ್​ಐ, ನಾಲ್ವರು ಎಎಸ್​ಐ ಸೇರಿ 22 ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

ಏರ್‌ಸ್ಟ್ರೈಕ್, ಡ್ರೋಣ್ ಅಟ್ಯಾಕ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಲು ಸೂಚಿಸಿದ್ದು, ದಾಳಿಯಾದ ವೇಳೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಂದ ಐಎಸ್‌ಡಿ ಡಿಜಿ ಮಾಹಿತಿ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಡ್ಯಾಂ ಭದ್ರತೆ ಅಲರ್ಟ್ ಮಾಡಲಾಗಿದೆ.

Author:

...
Sushmitha N

Copy Editor

prajashakthi tv

share
No Reviews