ಪಾವಗಡ :
ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡದ ಸುತ್ತಾ-ಮುತ್ತ ತಲೆಎತ್ತಿರುವ ಇದ್ದಿಲು ತಯಾರಿಕ ಘಟಕಗಳಿಂದ ಬರುವ ಹೊಗೆಯಿಂದಾಗಿ ಗ್ರಾಮಸ್ಥರು ಅಸ್ತಮಾ ಸೇರಿ ನಾನಾ ರೋಗಗಳಿಗೆ ತುತ್ತಾಗ್ತಾ ಇದಾರೆ ಅಂತ ಪ್ರಜಾಶಕ್ತಿ ಟಿವಿ ಸುದ್ದಿ ಬಿತ್ತರಿಸಿತ್ತು. ನಮ್ಮ ಸುದ್ದಿಗೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಇದ್ದಿಲು ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಅದರಂತೆ ಇಂದು ಇದ್ದಿಲು ತಯಾರಿಕಾ ಘಟಕಕ್ಕೆ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಿಮ್ಮ ಪ್ರಜಾಶಕ್ತಿ ಮಾಧ್ಯಮ ವರದಿ ಬಿತ್ತರದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಈಗಾಗಲೇ ಪಾವಗಡವನ್ನು ಬರದ ನಾಡೆಂದು ಕರೆಯಲಾಗುತ್ತೆ. ಇಂತಹ ಸಮಯದಲ್ಲಿ ಈ ರೀತಿಯಾಗಿ ಇದ್ದಿಲು ದಂಧೆ ಮಾಡುತ್ತ ಇರೋ ಮರಗಿಡಗಳಿಗೆ ಕೊಡಲಿ ಹಾಕಿದರೆ ಜನರು ಬದುಕೋದು ಹೇಗೆ. ಈ ಕಾರಣಕ್ಕೆ ನಾವು ಸುದ್ದಿ ಬಿತ್ತರಿಸಿದ್ದೇವು. ಇಂದು ಇದ್ದಿಲು ಕಾರ್ಖಾನೆಗೆ ಕಟ್ಟಿಗೆ ಸಾಗಿಸುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಿಡಿದು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಇದ್ದಿಲು ದಂಧೆಗೆ ಅರಣ್ಯ ಇಲಾಖೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿದೆ.