Recipes :
ಓಟ್ಸ್ ಸ್ಮೂತಿಯನ್ನು ಮನೆಯಲ್ಲೆ ಸುಲಭವಾಗಿ ಮಾಡಿಕೊಳ್ಳಬಹುದು. ಓಟ್ಸ್ ಸ್ಮೂತಿಯನ್ನು ಮಾಡಲು ಬೇಕಾಗುವ ಪದಾರ್ಥಗಳೆಂದರೆ
- ½ ಕಪ್ ಓಟ್ಸ್
- 1 ಕಪ್ ಹಾಲು (ಬಾದಾಮಿ ಹಾಲು, ಓಟ್ಸ್ ಹಾಲು ಅಥವಾ ಹಾಲು)
- 1 ಬಾಳೆಹಣ್ಣು
- 1 ಟೇಬಲ್ ಸ್ಪೂನ್ ಜೇನುತುಪ್ಪ
- ½ ಟೀ ಸ್ಪೂನ್ ದಾಲ್ಚಿನ್ನಿ ಪುಡಿ
- 1 ಟೇಬಲ್ ಸ್ಪೂನ್ ಚಿಯಾ ಬೀಜ
- 4-5 ಐಸ್ ಕ್ಯೂಬ್
ಮಾಡುವ ವಿಧಾನ:
- ಮೊದಲು ಓಟ್ಸ್ ಅನ್ನು 5-10 ನಿಮಿಷಗಳ ಕಾಲ ಹಾಲಿನಲ್ಲಿ ನೆನೆಸಿಡಿ – ಇದರಿಂದ ಸ್ಮೂತಿ ನಯವಾಗಿ ಬರುತ್ತದೆ.
- ನಂತರ ಬಾಳೆಹಣ್ಣು, ಜೇನುತುಪ್ಪ, ದಾಲ್ಚಿನ್ನಿ, ನೆನೆಸಿದ ಓಟ್ಸ್ ಮತ್ತು ಐಸ್ ಅನ್ನು ಮಿಕ್ಸರ್ ಜಾರಿನಲ್ಲಿ ಹಾಕಿ.
- ಎಲ್ಲವನ್ನೂ ಸ್ಮೂತ್ ಆಗುವವರೆಗೆ ಬ್ಲೆಂಡ್ ಮಾಡಿ.
- ಗ್ಲಾಸ್‌ಗೆ ಸುರಿದು ತಕ್ಷಣವೇ ಸೇವಿಸಿ! ಹೆಚ್ಚು ಪೌಷ್ಟಿಕತೆಯುಳ್ಳ ಸ್ಮೂತಿ ಬೇಕಾದರೆ ಒಮ್ಮೆ ಚಿಯಾ ಬೀಜ ಅಥವಾ ಪ್ರೋಟೀನ್ ಪೌಡರ್ ಸೇರಿಸಿ.