ಸಿನಿಮಾ : ಪ್ರತಿ ವರ್ಷದಂತೆ ಈ ವರ್ಷವೂ ಮೇ 13ರಿಂದ 24ರವರೆಗೆ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಚಲನಚಿತ್ರ ಹಬ್ಬ ಕಾನ್ ಫಿಲ್ಮ್ ಫೆಸ್ಟಿವಲ್ 2025 ಗೆ ಭರ್ಜರಿ ಚಾಲನೆ ಸಿಕ್ಕಿದೆ. ವಿಶ್ವದಾದ್ಯಾಂತದ ಚಿತ್ರರಂಗದ ಪ್ರತಿಭೆಗಳು, ಕಲಾವಿದರು, ತಾರೆಯರು ಇಲ್ಲಿ ತಮ್ಮದೇ ಆದ ಛಾಪು ಬಿಂಬಿಸುತ್ತಿದ್ದಾರೆ. ಈ ಬಾರಿಯ ಹಬ್ಬದಲ್ಲಿ ಕನ್ನಡದ ಕಿರುತೆರೆ ಮತ್ತು ಡಿಜಿಟಲ್ ತಾರೆಯಾಗಿ ಗುರುತಿಸಿಕೊಂಡಿರುವ ದಿಶಾ ಮದನ್ ಭಾಗವಹಿಸಿದ್ದು, ಕನ್ನಡ ಪ್ರೇಕ್ಷಕರಿಗೆ ವಿಶೇಷ ಖುಷಿಯ ಸಂಗತಿ.
ದಿಶಾ ಈ ಬಾರಿಯ ಫೆಸ್ಟಿವಲ್‌ಗೆ ಧರಿಸಿದ gown ವಿಶೇಷ ಗಮನ ಸೆಳೆಯುತ್ತಿದೆ. ದಿಶಾ ತೊಟ್ಟ gown ಯಾರೂ ಊಹಿಸದ ರೀತಿಯಲ್ಲಿ ಅವರ ಮದುವೆಯ ದಿನಗಳಲ್ಲಿ ತಾವು ತೊಟ್ಟಿದ್ದ ತಮ್ಮ ಅಮ್ಮನ ಸೀರೆಗಳಿಂದ ತಯಾರಾದದ್ದು. ಈ ಬಗ್ಗೆ ದಿಶಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಕೇವಲ gown ಅಲ್ಲ. ಇದು ನನ್ನ ಅಮ್ಮನ ಸೀರೆ. ನನ್ನ ಮದುವೆಯ ಸ್ಮರಣೆಯೆಂದಿಗೂ ನನ್ನ ಹೃದಯದಲ್ಲಿ ಬಾಳುವುದು. ಇದು ಫ್ಯಾಷನ್ ಅಷ್ಟೇ ಅಲ್ಲ — ಇದು ಭಾವನೆ ಎಂದು ಬರೆದುಕೊಂಡಿದ್ದಾರೆ.