ಸಿನಿಮಾ : ಜಯಂ ರವಿಗೆ 40 ಲಕ್ಷ ಜೀವನಾಂಶಕ್ಕೆ ಬೇಡಿಕೆಯಿಟ್ಟ ಹೆಂಡತಿ ಆರತಿ

JAYAM RAVI : ಜನಪ್ರಿಯ ತಮಿಳು ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ನಡುವಿನ ವೈವಾಹಿಕ ಬಾಂಧವ್ಯದಲ್ಲಿ ಬಿರುಕು ಬಿಟ್ಟಿದ್ದು, ಇತ್ತೀಚೆಗೆ ಇಬ್ಬರೂ ವಿಚ್ಛೇದನೆಗಾಗಿ ನ್ಯಾಯಾಲಯವನ್ನು ಮೊರೆಹೋದಿದ್ದಾರೆ. ಈಗಾಗಲೇ ಇಬ್ಬರೂ ಪರಸ್ಪರ ಸಂಬಂಧವನ್ನು ಪುನಃಸ್ಥಾಪಿಸಲು ಆಸಕ್ತಿ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಇಬ್ಬರು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ಚೆನ್ನೈನ 3ನೇ ಹೆಚ್ಚುವರಿ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದಿದ್ದು, ನ್ಯಾಯಾಧೀಶೆ ಥೆನ್ಮೋಳಿ ಅವರು ಈ ಪ್ರಕರಣವನ್ನು ಮುಂದಿನ ಹಂತಕ್ಕೆ ಕರೆದಿದ್ದಾರೆ. ವಿಚ್ಛೇದನದ ನಂತರ ಜೀವನ ನಿರ್ವಹಣೆಗೆ ಜಯಂ ರವಿ ಅವರ ಪತ್ನಿ ಆರತಿ ಅವರು ತಿಂಗಳಿಗೆ ₹40 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೋರಿದ್ದಾರೆ. ಅವರ ಮಾತುಗಳ ಪ್ರಕಾರ, ಅವರು ಮತ್ತು ಮಕ್ಕಳ ಭವಿಷ್ಯದ ಭದ್ರತೆಗಾಗಿ ಈ ಹಣ ಅಗತ್ಯವಾಗಿದೆ. ಇನ್ನು ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದೆ.

ಇತ್ತ, ಜಯಂ ರವಿ ಇತ್ತೀಚೆಗಷ್ಟೇ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಡೇಟಿಂಗ್‌ನಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿಯೂ ವಿವಾದ ಹುಟ್ಟಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಸಹ ನಡೆಯಿದ್ದು, ದಾಂಪತ್ಯ ಬಿರುಕು ಇನ್ನಷ್ಟು ಗಂಭೀರಗೊಂಡಿರುವ ಸೂಚನೆ ನೀಡಿದೆ.

ಈ ಸಂಬಂಧದ ಅಂತಿಮ ತೀರ್ಮಾನಕ್ಕಾಗಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದ್ದು, ಇಬ್ಬರೂ ತಮ್ಮ ಲಿಖಿತ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

 

 

Author:

...
Keerthana J

Copy Editor

prajashakthi tv

share
No Reviews