ದೇಶ : ಭಾರತವು ದಿನದಿಂದ ದಿನಕ್ಕೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುವಂತೆ ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಾನೇ ಬ್ರಹ್ಮೋಸ್‌ಗೆ ಹೆಚ್ಚುತ್ತಿರುವ ಬೇಡಿಕೆ. ಉತ್ತರ ಪ್ರದೇಶದಲ್ಲಿ ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದ್ದು, ವಾರ್ಷಿಕ 80 ರಿಂದ 100 ಕ್ಷಿಪಣಿ ತಯಾರಿಸುವ ಗುರಿ ಹೊಂದಿಗೆ. ಇತ್ತ ಇಸ್ರೋ ವಿಜ್ಞಾನಿಗಳು ಕೂಡ ಉಪಗ್ರಹ ಉಡಾವಣೆಯಲ್ಲಿ ಯಶಸ್ವಿಯಾಗ್ತಿದಾರೆ. ಇಸ್ರೋದ 101ನೇ ರಾಕೆಟ್ ಉಡಾವಣೆಗೆ ಸಕಲ ಸಿದ್ಧತೆಗಳು ನಡೆದಿದೆ.
ಈ ಬಗ್ಗೆ ಇಸ್ರೋ ತನ್ನ ಎಕ್ಸ್ ಖಾತೆ ಮೂಲಕ ಮಾಹಿತಿ ನೀಡಿದೆ. ಈ ಉಪಗ್ರಹವು ಭಾರತದ ಕಣ್ಗಾವಲು ಮತ್ತು ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ. ಇಸ್ರೋದ 101ನೇ ಉಡಾವಣೆ ಸಂಬಂಧ PSLV-C61/EOS-09ರ ಟೈಮ್‌ಲ್ಯಾಪ್ಸ್ ವಿಡಿಯೋ ಕಾಣಬಹುದು. ಇಸ್ರೋ ಜಾಗತಿಕವಾಗಿ ಸ್ಪರ್ಧಿಸುವುದಿಲ್ಲ, ಆದರೆ ಭಾರತದ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತದ ಸುರಕ್ಷತೆಗೆ ಮತ್ತು ಭದ್ರತೆ ನೀಡುವ ಬಾಹ್ಯಾಕಾಶ ಯೋಜನೆಗಳನ್ನು ವಿನ್ಯಾಸಗೊಳಿಸುವ ಮತ್ತು ಕಾರ್ಯಗತಗೊಳಿಸುವತ್ತ ಗಮನಹರಿಸಿದೆ ಎಂದಿದ್ದಾರೆ.