IPL 2025 :
ತವರು ನಾಡಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸೋತಿದ್ದ ಆರ್‌ಸಿಬಿ, ಇದೀಗ ದೆಹಲಿಯ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಆರ್ ಸಿಬಿ ಸಂಭ್ರಮಿಸಿದೆ. ಆರ್ ಸಿಬಿ ಗೆಲುವಿನ ನಗೆ ಬೀರ್ತಿದ್ದಂತೆ ಡಾಗೌಟ್ ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಕೊಹ್ಲಿ ಸಂಭ್ರಮಿಸಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 162 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.3 ಓವರ್ ಗಳಲ್ಲಿ ಚೇಸ್ ಮಾಡಿ 6 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಇನ್ನು ಮೈದಾನದಲ್ಲೇ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ನಡುವೆ ವಾಗ್ವಾದ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆರ್ ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಇಬ್ಬರಿಗೂ ವಾಗ್ವಾದ ನಡೆದಿದೆ. ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಯಾವ ವಿಚಾರಕ್ಕೆ ವಾದ ಮಾಡುತ್ತಿದ್ದಾರೆ ಅನ್ನೊದು ಸ್ಪಷ್ಟವಾಗಿ ತಿಳಿದಿಲ್ಲ.
ಏಪ್ರಿಲ್ 10 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಕೆಎಲ್ ರಾಹುಲ್ ಸಿನಿಮಾ ಶೈಲಿಯಲ್ಲಿ ವೃತ್ತ ಎಳೆದು ಇದು ನನ್ನ ಮೈದಾನ ಎಂದು ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ಇದೀಗ ವಿರಾಟ್ ಕೊಹ್ಲಿ ಕೂಡ ಇದು ನನ್ನ ಮೈದಾನ ಎಂದು ಕೆಎಲ್ ರಾಹುಲ್‌ಗೆ ಅವರ ಕಾಲೆಳೆದಿದ್ದಾರೆ. ಈ ವೇಳೆ ರಾಹುಲ್ ಹೌದು, ನಿಮ್ಮದೇ ಮೈದಾನ ಎಂದು ಪೆವಿಲಿಯನ್ ಮೇಲಿರುವ ಕೊಹ್ಲಿಯ ಹೆಸರನ್ನು ತೋರಿಸಿದ್ದು, ರಾಹುಲ್ ನ್ನು ಕೊಹ್ಲಿ ನಗುತ್ತಾ ತಬ್ಬಿಕೊಂಡಿದ್ದಾರೆ.