IPL 2025 :
ತವರು ಮೈದಾನದಲ್ಲೇ ಸತತ 3 ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ರಾಜಸ್ಥಾನ್ ರಾಯಲ್ಸ್ ಮೇಲೆ ಗೆಲುವು ಸಾಧಿಸೋ ಮೂಲಕ ತನ್ನ ವನವಾಸ ಅಂತ್ಯಗೊಳಿಸಿದೆ. ಆರ್ ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ 11 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬೇರೆ ಯಾವ ಬ್ಯಾಟರ್ ಕೂಡ ಮಾಡದೇ ಇರುವಂತಹ ಸಾಧನೆಯನ್ನು ಮಾಡೋ ಮೂಲಕ ಇತಿಹಾಸ ರಚಿಸಿದ್ದಾರೆ. ಕಿಂಗ್ ಕೊಹ್ಲಿ ರಾಜಸ್ಥಾನ್ ವಿರುದ್ದ ನಡೆದ ಪಂದ್ಯದಲ್ಲಿ 70 ರನ್ ಗಳಿಸೋ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಒಂದೇ ಕ್ರೀಡಾಂಗಣದಲ್ಲಿ 3500 ಟಿ20 ರನ್ ಗಳನ್ನು ಕಲೆ ಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರನ್ ಮಷಿನ್ ಪಾತ್ರರಾಗಿದ್ದಾರೆ.
ತವರಿನಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್ ಸಿಬಿ ಮತ್ತೇ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಈ ಆವೃತ್ತಿಯಲ್ಲಿ ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿರೋ ಬೆಂಗಳೂರು ತಂಡ 12 ಅಂಕಗಳೊಂದಿಗೆ 0.482 ನೆಟ್ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಒಟ್ಟಿನಲ್ಲಿ ಆರ್ ಸಿಬಿ ತವರಿನಲ್ಲಿ ರೋಚಕವಾಗಿ ಗೆದ್ದು ಬೀಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ, ಅಲ್ಲದೇ ಪ್ಲೇ ಆಫ್ ಕನಸಿನ ಬಗ್ಗೆ ಆರ್ ಸಿಬಿ ಫ್ಯಾನ್ಸ್ ಜೋರಾಗಿ ಮಾತನಾಡಿಕೊಳ್ತಿದ್ದಾರೆ.