IPL 2025: ನಾಳೆಯಿಂದ ಐಪಿಎಲ್‌ ಹಬ್ಬ ಆರಂಭ

ಇಂಡಿಯನ್‌ ಪ್ರೀಮಿಯರ್‌ ಲೀಗ್‌
ಇಂಡಿಯನ್‌ ಪ್ರೀಮಿಯರ್‌ ಲೀಗ್‌
ಕ್ರಿಕೆಟ್‌

ನಾಳೆಯಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಬ್ಬ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಎರಡೂ ತಂಡಗಳೂ ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿವೆ. ಆರ್‌ಸಿಬಿಯನ್ನು ರಜತ್‌ ಪಾಟೀದಾರ್‌ ಮುನ್ನಡೆಸುತ್ತಿದ್ದು, ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡವನ್ನು ಅನುಭವಿ ಮತ್ತು ಹಿರಿಯ ಆಟಗಾರ ಅಜಿಂಕ್ಯ ರಹಾನೆ ಮುನ್ನಡೆಸುತ್ತಿದ್ದಾರೆ.

17 ವರ್ಷಗಳ ನಂತರ ಎರಡೂ ತಂಡಗಳು ಐಪಿಎಲ್‌ನ ಉದ್ಘಾಟನಾ ಪಂದ್ಯವನ್ನು ಆರ್‌ಸಿಬಿ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ಆಡಲಿವೆ. ಇದಕ್ಕೂ ಮೊದಲು, ಆರ್‌ಸಿಬಿ ಮತ್ತು ಕೆಕೆಆರ್ 2008ರಲ್ಲಿ ಉದ್ಘಾಟನಾ ಪಂದ್ಯವನ್ನು ಆಡಿದ್ದವು. ಈ ಬಾರಿಯ ಐಪಿಎಲ್ 65 ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ, ಪ್ಲೇಆಫ್‌ಗಳು ಮತ್ತು ಫೈನಲ್‌ಗಳು ಸೇರಿದಂತೆ 74 ಪಂದ್ಯಗಳು 13 ಸ್ಥಳಗಳಲ್ಲಿ ನಡೆಯಲಿವೆ.

IPL ಪ್ರಾರಂಭಕ್ಕೂ ಮುನ್ನವೇ ಆರ್​ಸಿಬಿ ಎಡಗೈ ಬ್ಯಾಟರ್​​ ಫಾರ್ಮ್​ಗೆ ಮರಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ​ ದೇವದತ್​ ಪಡಿಕ್ಕಲ್​​ ಅವರನ್ನು ಈ ಬಾರಿ ನಂಬಿಕೆ ಇರಿಸಿ ಆರ್​ಸಿಬಿ, ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ಟೂರ್ನಿ ಪ್ರಾರಂಭಕ್ಕೂ ಮೊದಲೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪಡಿಕ್ಕಲ್, ಆರ್​ಸಿಬಿ ಇಟ್ಟ ನಂಬಿಕೆ ಉಳಿಸಿಕೊಂಡಿದ್ದಾರೆ.

 

 

Author:

share
No Reviews