ಕೊರಟಗೆರೆ:
ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದ ಹಿಂಭಾಗದಲ್ಲಿರೋ ಭೀಮ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನ ದೀಪ ಬೆಳಗುವ ಮೂಲಕ ಭೀಮ್ ಸಂಸ್ಥೆಯ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಈ ವೇಳೆ ಭೀಮ್ ರೂರಲ್ ಡೆವಲಪ್ಮೆಂಟ್ ಸಂಸ್ಥೆ ಮುಖ್ಯಸ್ಥರಾದ ರವಿಕುಮಾರ್, ಅಕ್ವಿನ್ ಫೈನಾನ್ಸಿಯಲ್ ಸಲ್ಯೂಷನ್ ಸಂಸ್ಥೆ ಡೈರೆಕ್ಟರ್ ವಿಜಯ್ ಕುಮಾರ್ ಆರ್.ವಿ , ವೈಸ್ ಪ್ರೆಸಿಡೆಂಟ್ ರೇಷ್ಮಾ ಗೋಯಲ್, ಶಿಕ್ಷಕರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.
ಅಕ್ವಿನ್ ಫೈನಾನ್ಸಿಯಲ್ ಸಲ್ಯುಷನ್ ಸಂಸ್ಥೆಯ ಪ್ರೆಸಿಡೆಂಟ್ ರೇಷ್ಮಾ ಗೋಯಲ್ ಮಾತನಾಡಿ ಭೀಮ್ ಸಂಸ್ಥೆಯಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ 400 ಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ಸ್ವಉದ್ಯೋಗದೊಂದಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ತಿದ್ದು, ವರ್ಷಕ್ಕೆ 1500 ಕ್ಕೂ ಹೆಚ್ಚು ಮಹಿಳೆಯರು ಈ ಸಂಸ್ಥೆಯಿಂದ ತಮ್ಮ ವಿದ್ಯಾಬ್ಯಾಸಕ್ಕೆ ತಕ್ಕಂತೆ ಅನೇಕ ರೀತಿಯ ತರಬೇತಿಗಳನ್ನ ಕಲಿತು ಇಂದು ಸ್ವಂತ ಉದ್ಯೋಗ ಸೃಷ್ಟಿಸಿಕೊಂಡು ಜೀವನ ನಡೆಸ್ತಿರೋದಕ್ಕೆ ಈ ಹೆಣ್ಣು ಮಕ್ಕಳೇ ಸಾಕ್ಷಿ ಎಂದರು.
ಇನ್ನು ಅಕ್ವಿನ್ ಫೈನಾನ್ಸಿಯಲ್ ಸಲ್ಯೂಷನ್ ಸಂಸ್ಥೆ ಡೈರೆಕ್ಟರ್ ವಿಜಯ್ ಕುಮಾರ್ ಮಾತನಾಡಿ ಈ ಸಂಸ್ಥೆಯಲ್ಲಿ ಮಹಿಳಾ ಶಿಕ್ಷಕರಿಂದ್ಲೇ ತರಬೇತಿ ನೀಡುತ್ತಿದ್ದು, ಇಲ್ಲಿರೋ ಪ್ರತಿ ಹೆಣ್ಣು ಮಕ್ಕಳಿಗೂ ವಿಶೇಷ ಭದ್ರತೆಯನ್ನ ಬೀಮ್ ಸಂಸ್ಥೆ ಒದಗಿಸ್ತಿದೆ. ಅಲ್ದೇ ಗ್ರಾಮೀಣ ಭಾಗದ ಪ್ರತಿ ಹೆಣ್ಣು ಮಕ್ಕಳು ತನಗೆ ಕಲಿಯೋ ಇಚ್ಛೆ ಇರೋ ಯಾವ್ದಾದ್ರೂ ಕೆಲಸದಲ್ಲಿ ಸಾಧನೆ ಮಾಡಿದ್ರೆ, ಆ ಗ್ರಾಮಕ್ಕೆ ಗೌರವ ತಂದು ಕೊಟ್ಟ ಹಾಗೆ ಎಂದು ತಿಳಿಸಿದ್ರು.ನಂತರ ಭೀಮ್ ಸಂಸ್ಥೆಯಿಂದ 400 ಕ್ಕೂ ಹೆಚ್ಚು ಮಹಿಳಾ ಸಾಧಕೀಯರಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.