Interesting : ಸತ್ತ ನಂತರ ಅಘೋರಿಗಳು ಹಾಗೂ ನಾಗಾಸಾಧುಗಳನ್ನು ಸುಡುವುದಿಲ್ಲ ಯಾಕೆ...?

ನಾಗಾಸಾಧುಗಳು  ಹಾಗೂ ಅಘೋರಿಗಳು
ನಾಗಾಸಾಧುಗಳು ಹಾಗೂ ಅಘೋರಿಗಳು
ವಿಜ್ಞಾನ-ತಂತ್ರಜ್ಞಾನ

Unknown facts :

ಪ್ರಯಾಗ್ ರಾಜ್ ನಲ್ಲಿ ಈಗಾಗಲೇ ಮಹಾ ಕುಂಭಮೇಳ ನಡೆಯುತ್ತಿದೆ. ವಿಶ್ವದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ವಿಶೇಷ ಅಂದರೆ ಕುಂಭಮೇಳ ಆರಂಭವಾಗುತ್ತಿದ್ದ ಹಾಗೆ ಸಹಸ್ರಾರು ಸಂಖ್ಯೆಯಲ್ಲಿ ಕಾಣ ಸಿಗುವವರು ಎಂದರೆ ನಾಗಾ ಸಾಧುಗಳು ಹಾಗೂ ಅಘೋರಿ ಬಾಬಾಗಳು. ಕುಂಭಮೇಳದಲ್ಲಿ ಈ ಸಾಧುಗಳ ಸಾಗರವೇ ಹರಿದು ಬರುತ್ತಿದೆ.

ಕುಂಭಮೇಳದಲ್ಲಿ ಕುಂಭ ಸ್ನಾನಕ್ಕೆ ವಿಶೇಷ ಮನ್ನಣೆ ಇದೆ. ನಾಗಾಸಾಧುಗಳು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರೆ. ನಾಗಾಸಾಧು, ಅಘೋರಿ ಆಗುವ ಪ್ರಕ್ರಿಯೆ ಸುಲಭವಲ್ಲ, ತಮಾಷೆಯೂ ಅಲ್ಲ. ಕಠಿಣ ಪರಿಶ್ರಮ ಪಟ್ಟು ನಾಗಾ ಸಾಧುಗಳಾಗಬೇಕಾಗುತ್ತದೆ. ಒಮ್ಮೆ ನಾಗಾಸಾಧು, ಅಘೋರಿಯಾದ ಬಳಿಕ ಅವರ ಜೀವನವೂ ಹಾಗೆ ಎಲ್ಲವನ್ನೂ ತ್ಯಜಿಸಿದ ಇವರಿಗೆ ನಂತರ ಶಿವನೇ ಎಲ್ಲಾ, ಇವರು ಶಿವನನ್ನೂ ಪೂಜಿಸುವ ರೀತಿಯೂ ಬಹಳ ಭಿನ್ನ.

ಇನ್ನು ಅಘೋರಿ ಬಾಬಾಗಳ ಜೀವನಕ್ಕೆ ಆರಂಭ, ಅಂತ್ಯ ಯಾವುದೂ ಇಲ್ಲ ಎನ್ನಲಾಗುತ್ತದೆ. ಇವರ ಬದುಕು ಎಷ್ಟು ಕಠಿಣವೋ , ಇವರ ಅಂತ್ಯ ಸಂಸ್ಕಾರ ಪ್ರಕ್ರಿಯೆಯೂ ಅಷ್ಟೆ ಭಯಾನಕ. ಇವರ ಮೃತದೇಹವನ್ನು ಸುಡುವುದಿಲ್ಲ, ಹೂಳುವುದಿಲ್ಲ ಹಾಗಂತ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಲಿ ಎಂದು ಬಿಡುವುದು ಇಲ್ಲ. ಬದಲಿಗೆ ಮರಣದ ನಂತರ , ಅವರ ಮೃತದೇಹವನ್ನು ತಲೆಕೆಳಕಾಗಿ ನೇತು ಹಾಕಲಾಗುತ್ತದೆ. ಹೀಗೆ ನೇತು ಹಾಕಿದ ಮೃತದೇಹದಲ್ಲಿ ಕ್ರಿಮಿಗಳು ಉತ್ಪತ್ತಿಯಾಗುವವರೆಗೆ ಈ ಮೃತ ದೇಹಕ್ಕೆ ಕಾವಲು ನೀಡಲಾಗುತ್ತದೆ. ನಂತರ ದೇಹವನ್ನು ಅಲ್ಲಿಂದ ತೆಗೆದು, ತಲೆಯನ್ನು ಬೇರ್ಪಡಿಸಿ ದೇಹದ ಉಳಿದ ಭಾಗವನ್ನು ಗಂಗಾ ನದಿಯಲ್ಲಿ ಎಸೆಯಲಾಗುತ್ತದೆ.

ಅಘೋರಿಗಳು ಪ್ರಮುಖವಾಗಿ ಶಿವನ ಆರಾಧಕರದರೂ ಕಾಳಿಯನ್ನು ಕೂಡ ಪೂಜಿಸುತ್ತಾರೆ. ಇವರು ಸಿದ್ದ ಮಂತ್ರಗಳನ್ನು ಜಪಿಸುತ್ತಲೇ ಇರುತ್ತಾರೆ. ಇವರು ಕುಂಭ ಮೇಳ ನಡೆಯುವ ಹೊತ್ತಿನಲ್ಲಿ ಮಾತ್ರ ಜನರ ಕಣ್ಣಿಗೆ ಬೀಳುವುದು. ಇದು ಬಿಟ್ಟರೆ ಯಾರಿಗೂ ಕಾಣಿಸಿಕೊಳ್ಳುವುದಿಲ್ಲ, ಸ್ಮಶಾನಗಳಲ್ಲಿ ಅಥವಾ ಜನರು ಬಾರದ ನಿರ್ಜನ ಪ್ರದೇಶಗಳಲ್ಲೇ ಇವರ ವಾಸ.

ಅಘೋರಿಗಳು ಮತ್ತು ನಾಗಾಸಾಧು ಒಂದೇ ಅಲ್ಲ, ಇವರ ಮಧ್ಯೆ ಬಹಳ ಮುಖ್ಯ ವ್ಯತ್ಯಾಸ ಇದೆ. ನಾಗಾ ಸಾಧುಗಳು ಬ್ರಹ್ಮಚರ್ಯವನ್ನು ಅನುಸರಿಸುತ್ತಾರೆ. ಜೀವಂತವಿರುವಾಗಲೇ ತಮ್ಮ ಪಿಂಡ ಪ್ರಧಾನ ಮಾಡಿ ನಂತರ ಸಾಧುಗಳಾಗುತ್ತಾರೆ.

ಆದರೆ ಅಘೋರಿಗಳು ಹಾಗಲ್ಲ, ಬ್ರಹ್ಮಚರ್ಯವನ್ನು ಅನುಸರಿಸಲೇ ಬೇಕು ಎನ್ನುವುದು  ಇಲ್ಲಿ ಕಡ್ಡಾಯ ಅಲ್ಲ. ತಮ್ಮ ದೈಹಿಕ ಆಸೆ ಆಕಾಂಕ್ಷೆ ತೀರಿಸಿಕೊಳ್ಳಲು ಇವರು ಮೃತದೇಹಗಳನ್ನು ಬಳಸಿಕೊಳ್ಳುತ್ತಾರೆಯಂತೆ. ಒಂದರ್ಥದಲ್ಲಿ ಇವರಿಗೆ ಮನುಷ್ಯತ್ವ ಎನ್ನುವುದು ಸಂಪೂರ್ಣವಾಗಿ ನಾಶವಾಗಿರುತ್ತದೆ. ನಾಗಾ ಸಾಧುಗಳು ಭಿಕ್ಷಾಟನೆಯಿಂದ ಜೀವನ ಸಾಗಿಸಿದರೆ, ಅಘೋರಿಗಳು ಮಾಂಸವನ್ನು ತಿಂದು ಬದುಕುತ್ತಾರೆ.

Author:

...
Editor

ManyaSoft Admin

Ads in Post
share
No Reviews