ಚಾಮರಾಜನಗರ : ಗ್ಯಾಸ್ ಡೆಲಿವರಿ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಪಟ್ಟಣದಲ್ಲಿ ಗ್ಯಾಸ್ ಡೆಲಿವರಿ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಂದು, ಮನೆಯಲ್ಲಿರುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ

  ಘಟನೆ ಮೇ 21ರಂದು ನಡೆದಿದ್ದರೂ ತಡವಾಗಿ ಬಹಿರಂಗವಾಗಿದೆ. ಆರೋಪಿಯು ಗ್ಯಾಸ್ ಕಂಪನಿಯಿಂದ ಬಂದಂತೆ ನಟನೆ ಮಾಡುತ್ತಾ ಮಹಿಳೆಯ ಮನೆ ಬಾಗಿಲು ತಟ್ಟಿದ್ದನು. ಮಹಿಳೆ ಬಾಗಿಲು ತೆರೆದಾಗ, "ನಾನು ಗ್ಯಾಸ್ ಡೆಲಿವರಿ ಮಾಡಲು ಬಂದಿದ್ದೇನೆ" ಎಂದು ಹೇಳಿದ್ದಾನೆ. ಆದರೆ ಮಹಿಳೆ "ನಾನು ಗ್ಯಾಸ್ ಬುಕ್ ಮಾಡಿಲ್ಲ" ಎಂದು ಉತ್ತರಿಸಿದರೂ, "ಸಿಲಿಂಡರ್ ಖಾಲಿ ಇದ್ದರೆ ತೆಗೆದುಕೊಳ್ಳಿ" ಎಂದು ನಂಬಿಸಿದ್ದಾನೆ.

ಮಹಿಳೆಯು ₹920 ರೂಪಾಯಿ ನೀಡಿದ ಬಳಿಕ, ಆರೋಪಿಯು ಕೆವೈಸಿ ಪ್ರಕ್ರಿಯೆಗಾಗಿ ಮನೆ ಹೊರಭಾಗದ ಫೋಟೋ ತೆಗೆಬೇಕು ಎಂದು ಹೇಳಿ ಆಕೆಯನ್ನು ಸಿಲಿಂಡರ್ ಪಕ್ಕ ನಿಲ್ಲಿಸಿ ಚಿತ್ರ ತೆಗೆದಿದ್ದಾನೆ. ಅಷ್ಟರಲ್ಲಿ ತಾನು ಬಂದ ಉದ್ದೇಶ ಬೇರೆಯೆಂಬುದನ್ನು ತೋರಿಸುತ್ತಾ ಆಕೆಯನ್ನು ತಳ್ಳಿಚಾಕುವನ್ನು ತೋರಿಸಿ "ಕಿರುಚಿದರೆ ನಿನ್ನನ್ನು ಕೊಂದು ಹಾಕುತ್ತೇನೆ" ಎಂದು ಬೆದರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮಹಿಳೆಯು ಪ್ರತಿರೋಧ ತೋರಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಗೆ ಅವರು ನೀಡಿದ ದೂರು ಮೇರೆಗೆ ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ತಕ್ಷಣವೇ ಬಂಧಿಸಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews