India :
ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ 27 ಮಂದಿ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದರು. ಇನ್ನು ಉಗ್ರರ ಗುಂಡೇಟಿಗೆ ಬಲಿಯಾಗಿದ್ದ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಅವರು ತಮ್ಮ ಗಂಡನ ಸಾವನ್ನು ಕಣ್ಣಾರೆ ಕಂಡವರು. ಮಗನ ಎದುರೇ ಪತಿಯನ್ನು ಉಗ್ರರು ಹತ್ಯೆ ಮಾಡಿದ್ದರು.
ಪಹಲ್ಗಾಮ್ ರಸ್ತೆಯ ಬಳಿ ಬೇಲ್ ಪುರಿ ತಿನ್ನುತ್ತಿರುವಾಗ ಉಗ್ರರು ಧರ್ಮದ ಬಗ್ಗೆ ಕೇಳಿ ಮುಸ್ಲಿಂ ಅಲ್ಲ ಎಂದು ಗೊತ್ತಾದ ಬಳಿಕ ಗುಂಡು ಹಾರಿಸಿದ್ದಾರೆ. ಈ ವೇಳೆ ನಮ್ಮನ್ನು ಕೊಲ್ಲಿ ಎಂದು ಪಲ್ಲವಿ ಸೇರಿ ಮಹಿಳೆಯರು ಕಣ್ಣೀರು ಹಾಕುತ್ತಾ ಹೇಳಿದ್ದಕ್ಕೆ, ಉಗ್ರರು ನಿನ್ನನ್ನು ಕೊಲ್ಲುವುದಿಲ್ಲ ಮೋದಿಗೆ ಹೇಳು ಎಂದಿದ್ದ. ಇದು ಭಾರತೀಯರಿಗೆ ರಕ್ತ ಕುದಿಯುವಂತೆ ಮಾಡಿತ್ತು. ಇದೀಗ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪ್ರತೀಕಾರವನ್ನು ತಿರೀಸಿಕೊಂಡಿದೆ.
ಇಂದು ನಸುಕಿನ ಜಾವ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಯೋಧರು ಪಾಕಿಸ್ತಾನದಲ್ಲಿ ಒಟ್ಟು 9 ಕಡೆಗಳಲ್ಲಿದ್ದ ಉಗ್ರರ ಅಡಗು ತಾಣಗಳನ್ನು ಏರ್ಸ್ಟ್ರೈಕ್ ಮೂಲಕ ಧ್ವಂಸ ಮಾಡಲಾಗಿದೆ. ಇನ್ನು ಈ ಆಪರೇಷನ್ ಸಿಂಧೂರ್‌ಗೆ ಭಾರತೀಯರಿಂದ ಶುಭಾಶಯಗಳ ಮಹಾ ಪೂರವೇ ಹರಿದು ಬಂದಿದೆ. ಮೋದಿಗೆ ಹೋಗಿ ತಿಳಿಸು ಎಂದು ಆತ ಹೇಳಿದ್ದ ಮಾತಿಗೆ ಇದೀಗ ತಕ್ಕ ಉತ್ತರವನ್ನು ನೀಡಿದ್ದು, ಇದಕ್ಕೆ ಸಂಭಾಷಣೆಗೆ ಸಂಬಂಧಿಸಿದ ಕಾರ್ಟೂನ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೀವೆ. ಉಗ್ರರು ಹತ್ಯೆ ಮಾಡಿದ್ದನ್ನು ಮೋದಿಗೆ ತಿಳಿಸು ಅಂದಿದ್ನಲ್ಲ, ತಿಳಿಸಿದೆ ಅಷ್ಟೇ.. ಎನ್ನುವ ಮಾತು ಜೊತೆಗೆ ಕಾರ್ಟೂನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.