India :
ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಕೈಗೊಂಡಿತ್ತು. ಆಪರೇಷನ್ ಸಿಂಧೂರದ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೆ ಮಿಸೈಲ್ ಆಟ್ಯಾಕ್ ಮಾಡಿತ್ತು. ಈ ಮಿಸೈಲ್ ದಾಳಿಯಲ್ಲಿ 9 ಅಡಗು ತಾಣಗಳು ಸಂಪೂರ್ಣ ಧ್ವಂಸವಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಬುಧವಾರದಿಂದಲೇ ದಾಳಿಗಳ ಮೇಲೆ ದಾಳಿ ನಡೆಸುತಿದ್ದರೆ. ಭಾರತದ ಸೇನೆ ಅದಕ್ಕೆ ಪ್ರತ್ಯುತ್ತರವಾಗಿ ಯುದ್ಧ ಮಾಡುತ್ತಲೇ ಬಂದಿದೆ. ಒಂದು ವೇಳೆ ಪಾಕಿಸ್ತಾನ ನೇರವಾಗಿಯೇ ಯುದ್ಧ ಸಾರಿದರೆ ದೇಶ ಯಾವ ನಿರ್ಣಯ ಕೈಗೊಳ್ಳಬೇಕು ಅನ್ನೋ ವಿಚಾರವಾಗಿ ಇಂದು ಸಂಸತ್ತಿನಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿತ್ತು.
ಇಂದು ಬೆಳಗ್ಗೆ ಆಪರೇಷನ್ ಸಿಂಧೂರ್ ಮತ್ತು ಪಾಕ್ ನೇರ ಯುದ್ಧದ ಕುರಿತಾಗಿ ಚರ್ಚಿಸಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ತುರ್ತಾಗಿ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದರು. ಈ ಸಭೆಗೆ ಸರ್ವಪಕ್ಷಗಳ ನಾಯಕರು ಕೂಡ ಹಾಜರಾಗಿದ್ದು. ಈ ಸಭೆಯಲ್ಲಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಎಲ್ಒಸಿಯಲ್ಲಿ ನಿರಂತರವಾಗಿ ಸಾಗುತ್ತಿರುವ ಗಡಿಯಾಚೆಗಿನ ದಾಳಿಗಳ ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ವಿವರಣೆ ನೀಡಿತು. ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಬೆಂಬಲ ವ್ಯಕ್ತಪಡಿಸಿದೆ .
ಇನ್ನು ಸರ್ವ ಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇತ್ತ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಸಂಸತ್ತಿಗಿಂತ ಮೇಲಿನವರಾ ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಬುಧವಾರ ನಸುಕಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣ ಗುರಿಯಾಗಿಸಿಕೊಂಡು ಭಾರತ ಕ್ಷಿಪಣಿ ದಾಳಿ ಕೈಗೊಂಡು, 9 ಉಗ್ರರ ಶಿಬಿರಗಳ ಮೇಲೆ ಈ ದಾಳಿ ನಡೆಸಿತು. ಈ ಕಾರ್ಯಾಚರಣೆ ಮತ್ತು ಇದಾದ ನಂತರದ ಪರಿಸ್ಥಿತಿಗಳ ಕುರಿತು ರಾಜಕೀಯ ಪಕ್ಷಗಳ ಜೊತೆ ಸರ್ಕಾರ ಚರ್ಚಿಸಿತು.
ಇತ್ತ ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಮಾತನಾಡಿ, ದೇಶದ ಹಿತಾಸಕ್ತಿ ಹಿನ್ನೆಲೆ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದರು. ಖರ್ಗೆ ಅವರು ಹೇಳಿದಂತೆ ನಾವು ಎಲ್ಲರೂ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಒಗ್ಗಟ್ಟು ಅಗತ್ಯ ಎಂದರು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇನ್ನು ಯುದ್ಧದ ವಿಚಾರವಾಗಿ ದೇಶದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.