ಬೆಂಗಳೂರು : ಭಾರತ- ಪಾಕ್‌ ಗಡಿಯಲ್ಲಿ ತಾರಕ್ಕೇರಿದ ಉದ್ವಿಗ್ನತೆ | ಸೈಬರ್‌ ದಾಳಿ ಸಾಧ್ಯತೆ.. ಪೊಲೀಸರಿಂದ ಹೈ ಅಲರ್ಟ್‌

ಬೆಂಗಳೂರು :

ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಪಾಪಿ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿದೆ. ವೈಮಾನಿಕ ದಾಳಿ ಮಾತ್ರವಲ್ಲದೇ ಸೈಬರ್‌ ದಾಳಿ ನಡೆಸಲು ಕೂಡ ಮುಂದಾಗಿದೆ, ಹೀಗಾಗಿ ಸಾರ್ವಜನಿಕರು ಹೈ ಅಲರ್ಟ್‌ ಆಗಿರುವಂತೆ ಪೊಲೀಸರು ಸೂಚಿಸಿದ್ದಾರೆ. ನಿನ್ನೆ ಪಾಕಿಸ್ತಾನದ ನಂಬರ್‌ನಿಂದ ಉಡುಪಿಯ ಕಾರ್ಕಳದ ಯುವಕನಿಗೆ ವಾಟ್ಸಪ್‌ ಮೆಸೇಜ್‌ ಬಂದಿದೆ. ಹೀಗಾಗಿ ಪಾಕಿಸ್ತಾನ ಸೈಬರ್‌ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದ್ದು ಜನರು ಎಚ್ಚರದಿಂದ ಇರುವಂತೆ ಪೊಲೀಸರು ಸಂದೇಶ ರವಾನಿಸಿದ್ದಾರೆ.

ಸೈಬರ್‌ ಡಿಫೈನ್ಸ್‌ ಅಧಿಕಾರಿಗಳು ಸೈಬರ್‌ ಅಪರಾಧಿಗಳು ಯುದ್ಧದ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಯಾವುದೇ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್‌ ಬಂದ್ರೆ ಅವುಗಳಿಗೆ ಪ್ರತಿಕ್ರಿಯೆ ನೀಡದಂತೆ ತಿಳಿಸಲಾಗಿದೆ. ಬೆಂಗಳೂರಿನಲ್ಲಿ ನಾನಾ ರಾಜ್ಯದ, ನಾನಾ ದೇಶಗಳ ಪ್ರಜೆಗಳು ವಾಸವಾಗಿರೋದ್ರಿಂದ ಬೆಂಗಳೂರಿನ ನಾಗರಿಕರ ಮೇಲೂ ಸೈಬರ್‌ ದಾಳಿ ನಡೆಸುವ ಸಾದ್ಯತೆ ಇರಲಿದ್ದು, ನಾಗರೀಕರು ಜಾಗರೂಕರಾಗಿರುವಂತೆ ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ವಿಡಿಯೋ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

ವಾಟ್ಸಪ್‌ನಲ್ಲಿ ಅಪರಿಚಿತ ಲಿಂಕ್‌, ಇಮೇಲ್‌ಗಳ ಮೇಲೆ ನಿಗಾವಹಿಸಿ, ಎಕ್ಸ್‌ಕ್ಲೂಸಿವ್‌ ನ್ಯೂಸ್‌ ಲಿಂಕ್‌ಗಳು ಹಾಗೂ ಫೈಲ್ಸ್, ಅಪರಿಚಿತ ಫಾರ್ವರ್ಡ್‌ ಲಿಂಕ್‌ ಕ್ಲಿಕ್‌ ಮಾಡದಂತೆ ಜಾಗೂ ವಾಟ್ಸಪ್‌ ಸೆಕ್ಯೂರಿಟಿಯನ್ನು ಅಪ್‌ಡೇಟ್‌ ಮಾಡಿಕೊಳ್ಳಲು ಕಮಿಷನರ್‌ ಬಿ.ದಯಾನಂದ್‌ ವಿಡಿಯೋ ಮೂಲಕ ನಾಗರಿಕರಿಗೆ ಸಂದೇಶ ರವಾನೆ ಮಾಡಿದ್ದಾರೆ.

ಪಾಕಿಸ್ತಾನ ನರಿಬುದ್ಧಿ ಮುಂದುವರೆಯಲಿದ್ದು ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಸಂದೇಶ ಬಂದ್ರೆ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ. ಸಂದೇಶಕ್ಕೆ ಏಮಾದ್ರು ರಿಪ್ಲೆ ಕೊಟ್ರೆ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಹಾಗೂ ನಿಮ್ಮ ಅಕೌಂಟ್‌ ಹ್ಯಾಕ್‌ ಆಗುವ ಸಾಧ್ಯತೆ ಇರಲಿದೆ.

Author:

...
Keerthana J

Copy Editor

prajashakthi tv

share
No Reviews