ಕ್ರಿಕೆಟ್ :
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿಗೆ ಅಭಿನಂದನೆ ಸಲ್ಲಿಸಿರುವ ಅನುಷ್ಕಾ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವಪೂರ್ಣ ಸಂದೇಶವೊಂದನ್ನು ಹಂಚಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೀನು ಯಾವ ಮಾರ್ಗವನ್ನು ತೋರಿಸಿದ್ದೀಯೋ, ಅದು ನನ್ನನ್ನೂ ಪ್ರೇರಿತಳನ್ನಾಗಿಸಿದೆ ಎಂದು ಅನುಷ್ಕಾ ಬರೆದಿದ್ದು, ವಿರಾಟ್ನ ನಿಷ್ಠೆ, ಶಿಸ್ತು ಮತ್ತು ಕ್ರಿಕೆಟ್ ಬದ್ಧತೆಯ ಕುರಿತು ಮನಬಿಚ್ಚಿ ಬರೆದುಕೊಂಡಿದ್ದಾರೆ. ಅವರೆಲ್ಲಾ ನಿನ್ನ ರೆಕಾರ್ಡ್ಸ್ ಹಾಗೂ ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟ ಮತ್ತು ಈ ಆಟದ ಸ್ವರೂಪಕ್ಕೆ ನೀವು ನೀಡಿದ ಅಚಲ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ.
ಪ್ರತಿ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರರಾಗಿ ಹಿಂತಿರುಗಿದ್ದೀರಿ ಮತ್ತು ನೀವು ಅದರ ಮೂಲಕ ವಿಕಸನಗೊಳ್ಳುವುದನ್ನು ನೋಡುವುದು ನೋಡಲು ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ. 'ನೀವು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೆಸ್ಟ್ನಿಂದ ನಿವೃತ್ತರಾಗುತ್ತೀರಿ ಎಂದು ನಾನು ಯಾವಾಗಲೂ ಊಹಿಸಿದ್ದೆ. ಆದರೆ ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ, ನೀವು ವಿದಾಯಕ್ಕೆ ಅರ್ಹರಿದ್ದೀರ ಎಂದು ಅನುಷ್ಕಾ ಶರ್ಮಾ, ಕೊಹ್ಲಿ ಟೆಸ್ಟ್ ನಿವೃತ್ತಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ನೀನು ಆಟವನ್ನೂ, ದೇಶವನ್ನೂ ಎಷ್ಟು ಪ್ರೀತಿಸುತ್ತೀಯೆ ಎಂಬುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿನ್ನ ಈ ಸಂಯಮ, ಶ್ರಮ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ನನಗೆ ಸದಾ ಪ್ರೇರಣೆಯಾಗಿದೆ. ನಿನ್ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿನ್ನ ಈ ಪ್ರಯಾಣದಲ್ಲಿ ನಾನು ಜತೆಯಾಗಿದ್ದೇನೆ. ನಿನ್ನ ಜೀವನದ ಈ ಟೆಸ್ಟ್ ಕ್ರಿಕೆಟ್ನ ಅಧ್ಯಾಯವನ್ನು ಎಷ್ಟು ಚೆನ್ನಾಗಿ ಮುಕ್ತಾಯಗೊಳಿಸಿದ್ದಕ್ಕೂ ನಮನ ಎಂದು ಬರೆದುಕೊಂಡಿದ್ದಾರೆ.