ಪಾವಗಡ:
ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಾಲಾ ವಾರ್ಷಿಕೊತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಹಾಗೂ ಶಾಲಾ ಆವರಣದಲ್ಲಿ ನಿರ್ಮಿಸಿರುವ ಒಂದು ಲಕ್ಷ ವೆಚ್ಚದ ರಂಗಮಂದಿರವನ್ನು ಸಮಾಜ ಸೇವಕಿ ಸಾಯಿಸುಮನ್ ಹನುಮಂತರಾಯಪ್ಪ ಉದ್ಟಾಟಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮೀನಾರಾಯಣ್ ಮತ್ತು ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಾರುತೀಶ್, ಶಾಲಾ ಶಿಕ್ಷಕರು, ಎಸ್ ಡಿ ಎಮ್ ಸಿ ಸದಸ್ಯರು, ಅಧ್ಯಕ್ಷರು ಉಪಸ್ಥಿತರಿದ್ದರು.
ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕಿ ಸಾಯಿಸುಮನ್ ಹನುಮಂತರಾಯಪ್ಪ ಸರ್ಕಾರಿ ಶಾಲೆಗಳು ಉಳಿಸುವ ಹಾಗೂ ಬೆಳಸುವುದೇ ನನ್ನ ಮೂಲ ಉದ್ದೇಶ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು. ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ಹುದ್ದೆಗಳಿಗೆ ಹೋಗಬೇಕು. ಸರ್ಕಾರಿ ಶಾಲೆಗಳನ್ನು ಉಳಿಸುವಂತಹ ಅಭಿಯಾನಕ್ಕೆ ನಾನು ಕೈ ಹಾಕಿದ್ದೇನೆ. ಶಾಲೆಯ ವಿಚಾರದಲ್ಲಿ, ಮಕ್ಕಳ ವಿಚಾರದಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತಲೇ ಇರುತ್ತೇನೆ ಎಂದು ತಿಳಿಸಿದರು.
ಈ ಭಾಗದ ಹಳೆಯ ವಿದ್ಯಾರ್ಥಿಯಾದ ಸ್ವರಣ್ಣ ನಾಯಕ್ ಒಬ್ಬ ಟೆಂಪೋ ಡ್ರೈವರ್ ಆದಂತಹ ಹಳೆ ವಿದ್ಯಾರ್ಥಿ ಈ ಶಾಲೆಗೆ 40,000 ಬೆಲೆಬಾಳುವ ಶುದ್ಧ ನೀರು ಘಟಕದ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ ಈ ಭಾಗದ ಸಾರ್ವಜನಿಕರು ಎಲ್ಲ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಉತ್ತಮ ಮಟ್ಟದ ಅಭಿವೃದ್ಧಿಗೊಳಿಸಬಹುದು ಎಂದರು.