ಶಿರಾ :
ಹಳ್ಳಿಗಳ ಬಡ ಜನರಿಗಾಗಿ ವಿಶೇಷವಾಗಿ ನಿರುದ್ಯೋಗಿಗಳಿಗಾಗಿ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಮೂಲಕ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ನರೇಗಾ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮಗಳು ನಡೆಯುತ್ತಿದ್ದು ಕಂಡು ಬರ್ತಾ ಇದೆ.ಪಾವಗಡ ತಾಲೂಕಿನಲ್ಲಿ ನರೇಗಾ ಯೋಜನೆಯ ಕಾಮಗಾರಿಗೆಜೆಸಿಬಿಯನ್ನು ಬಳಕೆ ಮಾಡ್ತಿದ್ದ ವೇಳೆ ಗಲಾಟೆ ನಡೆದಿದ್ದ ಪ್ರಕರಣ ಬೆಳಕಿಗೆ ಬಂದಿದ್ದು,ಇದೀಗ ಶಿರಾದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ನ ಅಧಿಕಾರಿಗಳು ನರೇಗಾ ಹಾಗೂ ಇತರೆ ಯೋಜನೆಯಲ್ಲಿ ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಅಕ್ರಮಗಳ ಬಗ್ಗೆ ಪಿಡಿಒ ಸೇರಿ ಅಧಿಕಾರಿಗಳು ಗಮನಹರಿಸ್ತಾ ಇಲ್ಲ ಹಾಗೂ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಬೇಸತ್ತ ಕುರುಬರಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಆಕ್ರೋಶ ಹೊರಹಾಕಿದ್ರು. ಅಲ್ಲದೆ ತಾಲೂ ತಾಲೂಕು ಪಂಚಾಯ್ತಿಯ ಉನ್ನತಮಟ್ಟದ ಅಧಿಕಾರಿಗಳು ಬರುವವರೆಗೂ ಬೀಗ ತೆಗೆಯುವುದಿಲ್ಲ ಅಂತಾ ಪಟ್ಟು ಹಿಡಿದಿದ್ದರು.
ಇನ್ನು ನರೇಗಾ ಯೋಜನೆಗೆ ಕುರುಬರಹಳ್ಳಿ ಗ್ರಾಮದ 458ಮಂದಿ ಜನರನ್ನು ಗ್ರಾಮ ಸಭೆ ಮೂಲಕ ನರೇಗಾ ಕಾಮಗಾರಿಗೆ ಆಯ್ಕೆ ಮಾಡಲಾಗಿತ್ತೆ.ಕಾಮಗಾರಿಗೆ ಆಯ್ಕೆಯಾದವರು ಉಳ್ಳವರಾಗಿದ್ದಾರೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಉಡಾಫೆ ಉತ್ತರ ಕೊಡ್ತಾ ಇದ್ದಾರೆ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ರು.ಆದ್ರೆ ಗ್ರಾಮಸ್ಥರು ಮಾಡ್ತಾ ಇರೋ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದರು.
ಕೊನೆಗೆ ಸ್ಥಳಕ್ಕೆ ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಕನಕಪ್ಪ,ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜಮಾಯಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ರು. ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಗ್ರಾಮಸ್ಥರು ಹಿಂಪಡೆದಿದರು.