BUEATY TIPS: ನೈಸರ್ಗಿಕವಾಗಿ ಚರ್ಮದ ಸುಕ್ಕು ಕಡಿಮೆ ಮಾಡಿಕೊಳ್ಳುವುದು ಹೇಗೆ..?

ಚರ್ಮದಲ್ಲಿನ ಎಲಾಸ್ಟಿನ್ ಒಂದು ಪ್ರೋಟೀನ್ ಆಗಿದ್ದು, ಅದು ಚರ್ಮಕ್ಕೆ ಬಿಗಿತವನ್ನು ನೀಡುತ್ತದೆ. ವಯಸ್ಸಾದಂತೆ ಚರ್ಮದಲ್ಲಿನ ಎಲಾಸ್ಟಿನ್ ಪ್ರಮಾಣವು ಕಡಿಮೆಯಾಗಿ ಚರ್ಮವು ಅದರ ಮೃದುತ್ವ ಕಳೆದುಕೊಳ್ಳುತ್ತದೆ. ನಮಗೆ ವಯಸ್ಸಾದಂತೆ ದೇಹದ ಎಲ್ಲಾ ಅಂಗಗಳಿಗೂ ವಯಸ್ಸಾಗಲು ಶುರುವಾಗುತ್ತದೆ. ನಮ್ಮ ಚರ್ಮವೂ ಇದಕ್ಕೆ ಹೊರತಾಗಿಲ್ಲ. ಮುಖವು ಸುಕ್ಕುಗಟ್ಟಿದಂತೆ ಕಾಣಲಾರಂಭಿಸಿದಂತೆ ನಮಗೆ ತ್ವಚೆಯ ಸೌಂದರ್ಯದ ಬಗ್ಗೆ ಆತಂಕ ಹೆಚ್ಚಾಗುತ್ತದೆ. ಚರ್ಮ ಸುಕ್ಕಾಗದಂತೆ ಕಾಣಲು ಏನೇನೋ ಚಿಕಿತ್ಸೆಗಳನ್ನು ಕೂಡ ಪಡೆಯುವವರಿದ್ದಾರೆ. ಆದರೆ, ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಚರ್ಮ ಬೇಗ ಸುಕ್ಕಾಗದಂತೆ ನೋಡಿಕೊಳ್ಳಬಹುದು.

*ಸೌತೆಕಾಯಿಯು ಎಲಾಸ್ಟಿನ್ ಮತ್ತು ಹೈಲುರಾನಿಕ್ ಆಮ್ಲವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೃಢವಾದ ಚರ್ಮವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಸೌತೆಕಾಯಿಯನ್ನು ಸಿಪ್ಪೆ ತೆಗೆದು, ಅದನ್ನು ಬ್ಲೆಂಡರ್​ನಲ್ಲಿ ಜ್ಯೂಸ್ ಮಾಡಿ. ಸ್ವಚ್ಛವಾದ ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ರಸವನ್ನು ಚರ್ಮದ ಮೇಲೆ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ.

*ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ನೈಸರ್ಗಿಕ ತೈಲಗಳು ಸಮೃದ್ಧವಾಗಿದೆ. ಇವು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತವೆ. ಹಣ್ಣಾದ ಬಾಳೆಹಣ್ಣಿನ ಕಾಲು ಭಾಗವನ್ನು ನಯವಾದ ಪೇಸ್ಟ್‌ ಮಾಡಿ. ಈ ಪೇಸ್ಟ್ ಅನ್ನು ಸ್ವಚ್ಛವಾದ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ಕಾಲ ಅದನ್ನು ಬಿಡಿ. ಮೊದಲು ತಣ್ಣೀರಿನ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಬಾದಾಮಿ ಎಣ್ಣೆ, ಆವಕಾಡೊ ಎಣ್ಣೆಯು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಚರ್ಮದ ಟೋನ್ ಮತ್ತು ಮೈಬಣ್ಣವನ್ನು ಸುಧಾರಿಸುತ್ತದೆ. ಇದು UV ವಿಕಿರಣದಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯುತ್ತದೆ. ಆವಕಾಡೊ ಎಣ್ಣೆಯು ತ್ವಚೆಯ ಬಿಗಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಅಂಶವಾದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

Author:

...
Sub Editor

ManyaSoft Admin

share
No Reviews