ತುಮಕೂರು : ಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ. ಬೇಸಿಗೆಯಿಂದ ತತ್ತರಿಸಿದ್ದ ಜನಕ್ಕೆ ಮಳೆರಾಯ ತಂಪೆರೆದಿದ್ರೆ, ಹಲದೆಡೆ ಬಿರುಗಾಳಿ ಸಹಿತ ಭಾರೀ ಮಳಿಗೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ. ಹೌದು ನಿನ್ನೆ ಸುರಿದ ಭಾರೀ ಮಳೆಗೆ ತುಮಕೂರು ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು ಸವಾರರು ಪರದಾಡುವಂತಾಯ್ತು.
ನಿನ್ನೆ ಸಂಜೆ ವೇಳೆ ತುಮಕೂರು ನಗರದಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ನಗರದ ಹಲವೆಡೆ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ, ನಗರದ ಔಟರ್ ರಿಂಗ್ ರೋಡ್ ಬಳಿ ಸರ್ವೀಸ್ ರಸ್ತೆ ಪೂರ್ತಿ ಕೆರೆಯಂತಾಗಿದ್ದು, ಬೈಕ್‌ಗಳು ಮುಳುಗಡೆಯಾಗಿದೆ. ಇತ್ತ ನಗರದ ಹೊರಪೇಟೆ ಸರ್ಕಲ್‌ನಲ್ಲಿ ಭಾರೀ ಮಳೆ ಆವಾಂತರವೇ ಸೃಷ್ಟಿಯಾಗಿತ್ತು ಸಂಪೂರ್ಣ ಜಲಾವೃತಗೊಂಡಿತ್ತು ಅಲ್ಲೇ ಚರಂಡಿ ಕಟ್ಟಿಕೊಂಡಿದ್ದು ಮಳೆ ನೀರಿನೊಂದಿಗೆ ಗಲೀಜು ನೀರಿನಿಂದ ರಸ್ತೆ ಕೆರೆಯಂತಾಗಿದ್ದು ಸವಾರರು ಪರದಾಡುವಂತಾಯ್ತು ಮಳೆಗಾಲ ಆರಂಭ ಆಗ್ತಾ ಇದ್ದು ನಗರದ ಚರಂಡಿಗಳನ್ನು ಪಾಲಿಕೆ ಸ್ವಚ್ಛ ಮಾಡಿದ್ರೆ ಈ ರೀತಿಯ ಸಮಸ್ಯೆ ಆಗಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ಇತ್ತ ತಿಪಟೂರಿನಲ್ಲೂ ನಿನ್ನೆ ಸಂಜೆ ಭಾರೀ ಮಳೆಯಾಗಿದ್ದು, ನಗರದ ಹಲವೆಡೆ ಹಲವು ಆವಾಂತರಗಳನ್ನು ಸೃಷ್ಟಿಮಾಡಿದೆ. ತಿಪಟೂರು ನಗರದಲ್ಲಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ತಿಪಟೂರು ನಗರದ ಗಾಂಧಿನಗರದ ವಿವೇಕಾನಂದ ರಸ್ತೆ ವೃತ್ತದಲ್ಲಿ ಅಂಗನವಾಡಿ ಪಕ್ಕದಲ್ಲಿರುವ ಧರೆಗುರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ಅಲ್ಲೇ ಅದೇ ಬೀದಿಯಲ್ಲಿ ಮತ್ತೊಂದು ಮರದ ಕೊಂಬೆ ಬಿದ್ದು, ಆಟೋಗೆ ಸ್ವಲ್ಪ ಹಾನಿಯಾಗಿದೆ.
ತಿಪಟೂರು ನಗರದ ಕೊಬ್ಬರಿ ಮಂಡಿಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮರವೊಂದು ನೆಲಕ್ಕುರುಳಿದ್ದು. ಕಾರು ಜಖಂ ಆಗಿದೆ. ಕೇವಲ 30 ದಿನಗಳ ಹಿಂದೆಯಷ್ಟೇ ಕಾರನ್ನು ತೆಗೆದುಕೊಂಡಿದ್ದು ಪಾರ್ಕಿಂಗ್ ಮಾಡಿದ್ದ ಜಾಗದಲ್ಲಿ ಬೃಹತ್ ಮರವೊಂದು ಬಿದ್ದು ಕಾರಿಗೆ ಹಾನಿಯಾಗಿದೆ.
ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಹಲವು ಅವಾಂತರಗಳು ಸೃಷ್ಟಿಯಾಗ್ತಿದೆ. ಇನ್ನು ಮಳೆ ಆರಂಭವಾದ ಮೇಲೆ ಇನ್ನು ಅದೆಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತೋ ಗೊತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮಳೆಯಿಂದ ಆಗುವ ಅವಾಂತರಗಳ ಬಗ್ಗೆ ಎಚ್ಚರ ವಹಿಸಬೇಕಿದೆ.