ಶಿರಾ : ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಈ ಮಳೆ ಒಂದು ಕಡೆ ರೈತರಿಗೆ ಸಂತಸ ತಂದರೆ ಮತ್ತೊಂದು ಕಡೆ ಅವಾಂತರ ಸೃಷ್ಠಿಯಾಗಿ ಜನರು ಪರದಾಡುತ್ತಿದ್ದಾರೆ. ಇತ್ತ ಶಿರಾ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಶಿರಾ ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲೇ ಭರ್ಜರಿ ಮಳೆಯಾಗುತ್ತಿದೆ. ತಾಲೂಕಿನ ಕೆಲವು ಕಡೆ ಹದವಾದ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸವನ್ನು ಉಂಟು ಮಾಡಿದೆ. ಭಾನುವಾರ ಮಧ್ಯಾಹ್ನದಿಂದಲೇ ಈ ಭಾಗದಲ್ಲಿ ಮಳೆಯ ಆರ್ಭಟ ಪ್ರಾರಂಭವಾಗಿದ್ದು, ತಾಲೂಕಿನ ಹುಂಜನಾಳು ಹಳ್ಳಕ್ಕೆ ಭರ್ಜರಿ ನೀರು ಹರಿದು ಬರುತ್ತಿದೆ. ಸೋಮವಾರ ರಾತ್ರಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಈ ಕಾರಣಕ್ಕೆ ಮುಂಗಾರು ಕೃಷಿಗೆ ಮಾಗಿ ಮಾಡಿದ್ದ ರೈತರ ಜಮೀನುಗಳಿಗೆ ನೀರು ಬಂದಿರುವುದನ್ನು ಕಂಡು ರೈತರು ಫುಲ್ ಖುಷಿಯಾಗಿದ್ದಾರೆ. ತಾಲೂಕಿನಲ್ಲಿ ಈ ವರ್ಷದ ಮಳೆ ಆರಂಭವಾಗಿದ್ದು, ಶುಭ ಸಂಕೇತ ಎಂದು ಬಣ್ಣಿಸಲಾಗುತ್ತಿದೆ. ಇತ್ತ ಬುಕ್ಕಾಪಟ್ಟಣ ಹೋಬಳಿ ರಂಗಪುರದ ಮರಡಿಗುಡ್ಡ, ಪುರಸಕ್ಕನೆ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.