ಶಿರಾ : ಇತ್ತೀಚೆಗೆ ತಾನೇ ಶಿರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗ್ರಾಚ್ಯುಟಿ ನೀಡಬೇಕು ಎಂದು ಪ್ರತಿಭಟನೆ ನಡೆಸಿ ತಾಲ್ಲೂಕು ತಹಶಿಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ರು. ಆದರೆ ಇಲ್ಲೊಂದು ಆಡಿಯೋ ವೈರಲ್ ಆಗುತ್ತಿದ್ದು, ಪ್ರತಿಭಟನೆಗೆ ಬರುವವರ ಬಳಿ 200 ರೂಪಾಯಿ ತರುವಂತೆ ಹೇಳಲಾಗಿದೆ. ಪ್ರತಿಭಟನೆಯ ಹೆಸರಲ್ಲಿ ಹಣ ವಸೂಲಿ ಮಾಡಲಾಗ್ತಿದ್ಯ ಅನ್ನೋ ಪ್ರಶ್ನೆ ಮೂಡುತ್ತಿದೆ.
ಹೌದು, ಆಡಿಯೋದಲ್ಲಿ ಮಹಿಳೆಯೊಬ್ಬರು ನಿವೃತ್ತಿ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರನ್ನ ತಹಶೀಲ್ದಾರ್ ಕಚೇರಿ ಬಳಿ ಕರೆತರಬೇಕು. ಆ ಜವಾಬ್ದಾರಿ ನಮ್ಮ ಕಾರ್ಯಕರ್ತರು ಮಾಡಬೇಕು. ಪ್ರತಿಭಟನೆಗೆ ಬರುವ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಬಳಿ ಆಧಾರ್ ಕಾರ್ಡ್ ಮತ್ತು 200 ರೂಪಾಯಿ ತರುವಂತೆ ಹೇಳಿದ್ದು. ಆ ಆಡಿಯೋ ಈಗ ವೈರಲ್ ಆಗುತ್ತಿದೆ.
ಇತ್ತ ತಾವು ಏನೋ ಸಹಾಯ ಮಾಡುತ್ತಿದ್ದೇವೆ ಅನ್ನೋ ಹೆಸರಿನಲ್ಲಿ ಪರೋಕ್ಷವಾಗಿ ಹಣ ವಸೂಲಿ ನಡೆಯುತ್ತಿದೆಯೇ ಅನ್ನೋ ಪ್ರಶ್ನೆ ಮೂಡುತ್ತಿದೆ. ಈಗಾಗಲೇ ನಿವೃತ್ತಿ ಹೊಂದಿರುವವರ ಬಳಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರು ಹಣ ಎಲ್ಲಿಂದ ತರುತ್ತಾರೆ? ತಾಲೂಕಿನಲ್ಲಿ ಸುಮಾರು 240 ಮಂದಿ ನಿವೃತ್ತಿ ಹೊಂದಿರುವವರು ಇದ್ದಾರೆ. ಒಬ್ಬೊಬ್ಬರ ಬಳಿ 200 ರೂಪಾಯಿ ಎಂದರೆ ಎಷ್ಟು ಹಣವಾಗುತ್ತದೆ.? ಆದ್ರೆ ಇಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಿದೆಯೇ ಅನ್ನೋ ಅನುಮಾನ ಕಾಡುತ್ತಿದೆ.