Healthy Tips:
ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವಿದ್ದರೆ ಎಲ್ಲಾ ಭಾಗ್ಯವು ಇದ್ದಂತೆ ಎನ್ನುವುದು ಇದರ ನಿಜವಾದ ಅರ್ಥ. ಆರೋಗ್ಯವಿಲ್ಲದೆ ಇದ್ದರೆ ಸಂಪಾದಿಸಿದ ಹಣವೆಲ್ಲವೂ ಆಸ್ಪತ್ರೆಗೆ ಹೋಗಿ ಸುರಿಯಬೇಕಾಗುತ್ತದೆ. ಇದರಿಂದ ಆರೋಗ್ಯದ ಕಾಳಜಿ ವಹಿಸುವುದು ಅತೀ ಅಗತ್ಯವಾಗಿ ಇರುವುದು. ಆರೋಗ್ಯವಿಲ್ಲದೆ ಇದ್ದರೆ ಖಂಡಿತವಾಗಿಯೂ ಜೀವನ ದುಸ್ತರ ಎನಿಸುವುದು. ಅದರಲ್ಲೂ ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಆರೋಗ್ಯದ ಮೇಲೆ ಅತಿಯಾದ ಒತ್ತಡ ಬೀಳುವುದು. ಈ ಕಾರಣದಿಂದಾಗಿ ಬದುಕು ಸರಾಗವಾಗಿ ಸಾಗಬೇಕಾದರೆ ಉತ್ತಮ ಆರೋಗ್ಯವಿರಬೇಕು.
*ಉಪಾಹಾರ ಯಾವತ್ತಿಗೂ ಬಿಡಬೇಡಿ ದಿನದ ಆಹಾರದಲ್ಲಿ ಉಪಾಹಾರವು ಅತೀ ಪ್ರಾಮುಖ್ಯವಾಗಿರುವ ಆಹಾರವಾಗಿರುವುದು. ದಿನದ ಆರಂಭ ಮಾಡಲು ನೀವು ತುಂಬಾ ಶಕ್ತಿಯುತ ಉಪಾಹಾರವನ್ನು ಸೇವಿಸಬೇಕು. ಉಪಾಹಾರದಿಂದ ನಿಮಗೆ ದಿನಪೂರ್ತಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಶಕ್ತಿ ಸಿಗುವುದು.
*ದಿನನಿತ್ಯ ವ್ಯಾಯಾಮ ಮಾಡಿ. ಹೆಚ್ಚಿನ ಜನರು ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ವ್ಯಾಯಾಮದಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸಿಕೊಳ್ಳುವುದು ತುಂಬಾ ಸುಲಭ. ನೀವು ಆರೋಗ್ಯವಾಗಿರಬೇಕು ಎಂದರೆ ವ್ಯಾಯಾಮವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕಾರಿ ಜೀವನ ನಡೆಸಲು ಪ್ರತಿನಿತ್ಯ ನೀವು 30 ನಿಮಿಷ ವ್ಯಾಯಾಮ ಮಾಡಬೇಕು.
*ಆಹಾರದ ಬಗ್ಗೆ ಗಮನವಿರಲಿ ನೀವು ಏನು ತಿನ್ನುತ್ತೀರಿ ಎನ್ನುವುದರ ಮೇಲೆ ಆರೋಗ್ಯವು ಅವಲಂಬಿತವಾಗಿರುವುದು. ಹೊಟ್ಟೆ ಹಸಿದಿದೆ ಎಂದು ನೀವು ತಿನ್ನುವ ಬದಲು ಏನು ತಿನ್ನುತ್ತಿದ್ದೀರಿ ಎಂದು ಮುಖ್ಯವಾಗಿ ಗಮನಿಸಬೇಕು. ಒಂದು ಕಾರ್ಯಸೂಚಿಯನ್ನು ತಯಾರಿಸಿಕೊಳ್ಳಿ. ನಿಮ್ಮ ಆಹಾರದಲ್ಲಿ ಕೆಲವೊಂದು ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀಜಗಳು, ಹಾಲಿನ ಉತ್ಪನ್ನಗಳು ಮತ್ತು ಹಸಿರೆಲೆ ತರಕಾರಿಗಳನ್ನು ಸೇರಿಸಿಕೊಳ್ಳಿ.
*ಮಾನಸಿಕ ಆರೋಗ್ಯದ ಬಗ್ಗೆ ಗಮನವಿರಲಿ ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಅತೀ ಮುಖ್ಯವಾಗಿರುವುದು. ಸಂಪೂರ್ಣ ಆರೋಗ್ಯವು ಬೇಕೆಂದಾದರೆ ಆಗ ಮಾನಸಿಕ ಆರೋಗ್ಯವು ಅತೀ ಅಗತ್ಯವಾಗಿರುವುದು. ಮನಸ್ಸನ್ನು ಶಾಂತಗೊಳಿಸಲು ನೀವು ಉಸಿರಾಟದ ವ್ಯಾಯಾಮ ಮಾಡಿ.
*ಸರಿಯಾಗಿ ನಿದ್ರೆ ಮಾಡಿ ಸರಿಯಾದ ನಿದ್ರೆಯು ಅತೀ ಅಗತ್ಯವಾಗಿ ಬೇಕು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ದೇಹದ ಕಾರ್ಯನಿರ್ವಹಣೆ ಮೇಲೆ ಅದು ಪರಿಣಾಮ ಬೀರುವುದು. ದಿನವನ್ನು ಉತ್ತಮವಾಗಿ ಆರಂಭ ಮಾಡಲು ಮತ್ತು ಸರಿಯಾಗಿ ದಿನದ ಕೆಲಸಗಳನ್ನು ಮಾಡಲು ಸರಿಯಾದ ನಿದ್ರೆ ಕೂಡ ಅತೀ ಅಗತ್ಯವಾಗಿ ಬೇಕು.