ಬಜೆಆರೋಗ್ಯ-ಜೀವನ ಶೈಲಿ
Health Tips :
ಬಜೆ ಬೇರಿನ ಹೆಸರನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆಯುರ್ವೇದ ಪದ್ದತಿಯಲ್ಲಿನ ಅನೇಕ ಗಿಡಮೂಲಿಕೆಗಳಲ್ಲಿ ಇದು ಒಂದು. ಬಜೆ ಎಂದು ಕರೆಯುವ ಈ ಮೂಲಿಕೆ ಸಾಮಾನ್ಯವಾಗಿ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಜೊತೆಗೆ ಎಲ್ಲಾ ವಯಸ್ಸಿನವರ ಆರೋಗ್ಯಕ್ಕೂ ಇದು ಬಹಳ ಹಿತಕರ . ಹಾಗಾಗಿ ಬಜೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಬಳಸಬಹುದಾದ ಆರೋಗ್ಯಯುತ ಮೂಲಿಕೆಯಾಗಿದೆ.
ಸ್ವಲ್ಪ ಖಾರ, ಆಹ್ಲಾದವೆನಿಸುವ ಪರಿಮಳವನ್ನು ಹೊಂದಿರುವ ಬಜೆ ಬೇರು ಹಳ್ಳಿ ಮನೆಗಳಲ್ಲಿ ಕಂಡು ಬರುವುದು ಸಾಮಾನ್ಯ. ಹಾಗಾದರೆ ಈ ಬಜೆ ಬೇರನ್ನು ಯಾವೆಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಜ್ವರ ಬರುತ್ತಿದ್ದರೆ ಬಜೆಯ ಬೇರನ್ನು ತೇಯ್ದು ಹಾಲಿನೊಂದಿಗೆ ಬೆರೆಸಿ ಅದನ್ನು ಸೇವನೆ ಮಾಡಬೇಕು. ತುಂಬಾ ಚಿಕ್ಕವರಾದರೆ ನಾಲಗೆಯ ಮೇಲಿಟ್ಟು ಅದನ್ನು ತಿನ್ನುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಮಾತ್ರವಲ್ಲ ವಯಸ್ಕರು ಕೂಡಾ ಬಜೆ ಬೇರನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಜೊತೆಗೆ ದೇಹದಲ್ಲಿ ಚುರುಕುತನ ಮೂಡುತ್ತದೆ. ಜೊತೆಗೆ ಸ್ಮರಣಶಕ್ತಿ, ಬುದ್ದಿ ಚುರೂಕಾಗಲೂ ಕೂಡ ಇದನ್ನು ಬಳಸುತ್ತಾರೆ. ಈ ಬಜೆ ಬೇರನ್ನು ಲಿಂಬು ರಸದಲ್ಲಿ ತೇಯ್ದು ಸೇವನೆ ಮಾಡಲಾಗುತ್ತದೆ.
ಮಕ್ಕಳಿಗೆ ಮಾತು ಬರಲು ತಡವಾಗಿದ್ದಲ್ಲಿ ಅಥವಾ ಸ್ಪಷ್ಟ ಉಚ್ಚಾರಣೆ ಇಲ್ಲದಿದ್ದರೆ ಪ್ರತಿದಿನ ಬಜೆಯ ಬೇರನ್ನು ತೇಯ್ದು ಜೇನಿನೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ತಿನ್ನಿಸಬೇಕು . ಒಂದು ವರ್ಷದೊಳಗಿನ ಮಕ್ಕಳಿಗೆ ಪ್ರತಿದಿನ ಬಜೆಯ ಬೇರನ್ನು ಸುಟ್ಟು ಭಸ್ಮ ತಯಾರಿಸಿ ಎರಡು ಚಿಟಿಕಿಯಷ್ಟು ಜೇನುತುಪ್ಪ ಬೆರೆಸಿ ತಿನ್ನಿಸಬೇಕು . ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಪದೇ ಪದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಈ ಗಿಡ ಮೂಲಿಕೆಯನ್ನು ಗ್ಯಾಸ್ಟ್ರಿಕ್ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದಾಗಿದೆ. ಇದು ನಿಮ್ಮ ಜೀರ್ಣ ಶಕ್ತಿಯನ್ನು ಸುಧಾರಿಸಿ ತಿಂದ ಆಹಾರ ಸುಲಭದಲ್ಲಿ ಜೀರ್ಣವಾಗುವಂತೆ ಮಾಡುತ್ತದೆ. ಹೀಗಾಗಿ ಬಜೆ ಬೇರನ್ನು ಚೂರ್ಣ ಮಾತ್ರೆ ಅಥವಾ ಪುಡಿ ರೂಪದಲ್ಲಿ ಅಧಿಕವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಬಜೆ ಬೇರನ್ನು ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ಆತಂಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಈ ಔಷಧಿಯನ್ನು ಬಳಸಲಾಗುತ್ತದೆ. ಅಲ್ಲದೆ ಇದರ ಪರಿಮಳದಿಂದ ಖಿನ್ನತೆ ದೂರವಾಗುತ್ತದೆ. ಈ ಬೇರು ಊರಿಯೂತದ ಲಕ್ಷಣ ಹೊಂದಿದ್ದು ಇದನ್ನು ತೇಯ್ದು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಊತ ಕಡಿಮೆಯಾಗುತ್ತದೆ. ಜೊತೆಗೆ ದೇಹದಲ್ಲಿ ವಾತ ದೋಷವನ್ನು ಸಮತೋಲನಗೊಳಿಸುವ ಸಂಧಿವಾತಕ್ಕೆ ಬಳಸಲಾಗುತ್ತದೆ