ತುಮಕೂರು:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತ ಆಯ್ತು ಈಗ ಬಡ್ಡಿದಂಧೆಕೋರರ ಕಾಟ ಜನರ ರಕ್ತವನ್ನು ಹೀರುತ್ತಿದೆ. ಮೈಕ್ರೋ ಫೈನಾನ್ಸ್‌ಗಳಿಗೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದ ಬಳಿಕವೂ ಫೈನಾನ್ಸ್‌ದಾರರ ಕಾಟಕ್ಕೆ ಜನರು ಉಸಿರು ನಿಲ್ಲಿಸಿದ್ದ ವರದಿಗಳು ಅಲ್ಲಲ್ಲಿ ಬೆಳಕಿಗೆ ಬಂದಿದ್ವು. ಮೈಕ್ರೋ ಫೈನಾನ್ಸ್‌ಗಳ ಸೆಡ್ಡು ಹೊಡೆದಂತೆ ಬಡ್ಡಿದಂಧೆಕೊರರು ಜನರ ಪ್ರಾಣದ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ, ಈವರೆಗೂ ಬಡ್ಡಿದಂಧೆಕೊರರ ಕಾಟಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ. ಊರು ಬಿಟ್ಟು ಬಂದಿದ್ರು ಕೂಡ ಬಡ್ಡಿದಂಧೆಕೊರರು ಕಿರುಕುಳ ನೀಡಿದ್ದು, ಬಡ್ಡಿ ವಿಚಾರಕ್ಕೆ ಬೇಸತ್ತು ಇಂದು ಸೆಲ್ಫ್ ವಿಡಿಯೋ ಮಾಡಿಟ್ಟು ಕೀಟನಾಶ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ.
ಬಡ್ಡಿದಂಧೆಕೋರರ ಕಾಟಕ್ಕೆ ಬೇಸತ್ತಿದ್ದ ಮಂಡ್ಯದ ವ್ಯಾಪಾರಿಯೊಬ್ಬರು ಕಳೆದ 10 ದಿನಗಳಿಂದ ತುಮಕೂರಿಗೆ ಬಂದಿದ್ದು, ಜೋಡಿ ಮಸೀದಿಯಲ್ಲಿ ತಂಗಿದ್ರು. ಊರು ಬಿಟ್ಟು ಬಂದಿದ್ರು ಕೂಡ ಬಡ್ಡಿಕೋರರ ಕಾಟ ಮಾತ್ರ ತಪ್ಪಲಿಲ್ಲ ಹಾಗಾಗಿ ಬೇಸತ್ತ ವ್ಯಕ್ತಿಯೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ. ಮಂಡ್ಯ ಮೂಲದ ವಜೀದ್ ಖಾನ್ ಎಂಬಾತ ಮಂಡ್ಯ ನಗರದಲ್ಲಿ ಹಣ್ಣಿನ ವ್ಯಾಪಾರ ಇಟ್ಟುಕೊಂಡು ಜೀವನ ಮಾಡ್ತಾ ಇದ್ರು. ಈ ವೇಳೆ ಹಣ್ಣಿನ ವ್ಯಾಪಾರ ಮಾಡುವ ಪಕ್ಕದಲ್ಲೇ ಇದ್ದ ದಿನಸಿ ಅಂಗಡಿ ಮಾಲೀಕ ಅಂಗಡಿಯನ್ನು ಮಾರಾಟ ಮಾಡಲು ಮುಂದಾಗಿದ್ದ. ಆ ಅಂಗಡಿ ಮಾಲೀಕ ಅಂಗಡಿಯನ್ನು ಹಣ್ಣಿನ ವ್ಯಪಾರ ಮಾಡ್ತಾ ಇದ್ದ ಮಜೀದ್‌ಗೆ ಕೊಂಡುಕೊಳ್ಳುವಂತೆ ಒತ್ತಾಯ ಮಾಡಿದ್ರು. ಅಂಗಡಿ ತಗೊಂಡ್ರೆ ನಮಗೆ ಅನುಕೂಲ ಆಗುತ್ತೆ ಅಂತಾ ಲೆಕ್ಕಾಚಾರ ಹಾಕಿದ ಮಜೀದ್ ಫೈನಾನ್ಸ್‌ಗಳಿಂದ ಹಾಗೂ ಪರಿಚಯಸ್ಥರಿಂದ ಬಡ್ಡಿಗೆ ಸಾಲ ಪಡೆದುಕೊಂಡು ಅಂಗಡಿ ಕೊಂಡುಕೊಂಡಿದ್ದ.
ಇನ್ನು ದಿನಸಿ ಅಂಗಡಿಯಿಂದ ಮಜೀದ್‌ಗೆ ಯಾವುದೇ ಲಾಭ ಮಾತ್ರ ಬರ್ತಾ ಇರಲಿಲ್ಲ. ಆದ್ರು ಹೇಗೋ ಅಂಗಡಿಯನ್ನು ನಡೆಸಿಕೊಂಡು ಹೋಗ್ತಾ ಇದ್ದ. ಆದ್ರೆ ಅಂಗಡಿಯನ್ನು ಸೇಲ್ ಮಾಡಿದ ವ್ಯಕ್ತಿ ಅಂಗಡಿ ವ್ಯಾಪಾರದ ಹಣವನ್ನು ಕೂಡಲೇ ಕಟ್ಟುವಂತೆ ಹಿಂಸೆ ಕೊಡ್ತಾ ಇದ್ನಂತೆ. ಅಲ್ದೇ ಬಡ್ಡಿಗೆ ಅಂತಾ ಸಾಲ ಪಡೆದುಕೊಂಡಿದ್ದ ವ್ಯಕ್ತಿಯೂ ಕೂಡ ಸಾಲದ ಹಣ ಕಟ್ಟುವಂತೆ ಪೀಡಿಸಲು ಶುರು ಮಾಡಿದ್ದರಂತೆ.. ಜೊತೆಗೆ ಇತ್ತೀಚಿಗೆ ವ್ಯಪಾರ ಸ್ವಲ್ಪ ಕಡಿಮೆ ಆಗಿದ್ದರಿಂದ ಬಡ್ಡಿ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಬಡ್ಡಿ ಕಟ್ಟುವಂತೆ ಸಾಲಗಾರರು ಕಾಟ ಕೊಡಲು ಶುರು ಮಾಡಿದ್ದಾರೆ. ಒಂದು ಸಾಲದ ಹಣ ಕಟ್ಟಿ ಇಲ್ಲ 1 ಲಕ್ಷಕ್ಕೆ 10 ಸಾವಿರ ಬಡ್ಡಿ ಕಟ್ಟುವಂತೆ ಪೀಡಿಸಿದ್ದಾರಂತೆ.. ಸ್ವಲ್ಪ ಟೈಂ ಕೊಡಿ ಅಂತಾ ಬೇಡಿಕೊಂಡ್ರು ಸಾಲ ನಿತ್ಯ ಕಾಟ ಕೊಡಲು ಶುರುಮಾಡಿದ್ದಾರೆ. ಸಾಲಗಾರರ ಕಾಟಕ್ಕೆ ಬೇಸತ್ತು ಮಜೀದ್ ಹಾಗೂ ಅವರ ಮಗ ಮಂಡ್ಯವನ್ನು ಬಿಟ್ಟು ತುಮಕೂರಿಗೆ ಬಂದಿದ್ರು. ಮಜೀದ್ ಹಾಗೂ ಅವರ ಮಗನಿಗೆ ಜೋಡಿ ಮಸೀದಿಯಲ್ಲಿ ಆಶ್ರಯವನ್ನು ಕೊಡಲಾಗಿತ್ತು. ಆದ್ರೆ ಊರು ಬಿಟ್ಟು ಬಂದಿದ್ರು ಕೂಡ ಸಾಲಗಾರರ ಕಾಟ ಮಾತ್ರ ತಪ್ಪಲಿಲ್ಲ. ಬಡ್ಡಿದಂಧೆಕೋರರ ಕಾಟಕ್ಕೆ ಬೇಸತ್ತ ಮಜೀದ್ ಸೆಲ್ಫಿ ವಿಡಿಯೋ ಮಾಡಿ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವಿಸಿದ ಮಜೀದ್‌ನನ್ನು ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು. ಆದ್ರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕಷ್ಟಪಟ್ಟು ದುಡಿದು ಎಲ್ಲರಂತೆ ಉತ್ತಮ ಸ್ಥಿತಿಯಲ್ಲಿ ಬದುಕಬೇಕೆಂದು ಆಸೆಪಟ್ಟ ಮಜೀದ್. ಸಾಲ ಮಾಡಿ ಅಂಗಡಿಗೆ ಬಂಡವಾಳ ಕೂಡ ಹಾಕಿದ್ರು. ಆದ್ರೆ ಅವರ ದುರಾದೃಷ್ಟವೋ ಏನೋ ವ್ಯಾಪಾರವೂ ಸರಿಯಾಗಿ ಆಗ್ತಾ ಇರಲಿಲ್ಲ. ಇತ್ತ ಸಾಲಗಾರರ ಕಾಟ ಕೂಡ ಹೆಚ್ಚಾಗಿ ವಿಧಿ ಇಲ್ಲದೇ ಸಾವಿಗೆ ಶರಣಾಗಲು ಮಜೀದ್ ನಿರ್ಧರಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು ಮಾತ್ರ ದುರಂತ. ಕಷ್ಟ ಅಂತಾ ಸಾಲ ಕೊಟ್ಟ ಮೇಲೆ ಬಡ್ಡಿ ಕೇಳುವುದು ಅವರ ಧರ್ಮ ಆದ್ರೆ ಸಾಲ ಪಡೆದವರನ್ನು ಪೀಡಿಸುವುದು ಎಷ್ಟು ಸರಿ. ದಿನೇ ದಿನೇ ಬಡ್ಡಿ ದಂಧೆಗೆ ಬಲಿಯಾಗೋರು ಹೆಚ್ಚಾಗ್ತಾ ಇದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.