ಸಿನಿಮಾ: ಹ್ಯಾಪಿ ಬರ್ತ್‌ ಡೇ ಪುಟ್ಮಲ್ಲಿ

ಸಿನಿಮಾ: 

ಇಂದು ಸ್ಯಾಂಡಲ್‌ ವುಡ್‌ ಪುಟ್ಮಲ್ಲಿಗೆ ಬರ್ತ್‌ ಡೇ ಸಂಭ್ರಮ. ತಮ್ಮ ಅತ್ಯದ್ಬುತ ನಟೆಯಿಂದಲೇ  ಚಿತ್ರರಸಿಕರ ಮನಗೆದ್ದ  ನಟಿ  ಉಮಾಶ್ರೀ  ಯಾವ  ಪಾತ್ರಬೇ ಕಾದ್ರೂ ಜೀವತುಂಬಿ ನಟಿಸೋ ಚತುರೆ. ಇಂತಹಕಲಾವಿದೆ ನಮ್ಮ ಕನ್ನಡ  ಚಿತ್ರರಂಗದವರು ಎನ್ನುವುದು  ನಮ್ಮ ಹೆಮ್ಮೆ. ಇನ್ನು ಇವರು  ನಮ್ಮ  ತುಮಕೂರಿನ  ಹೆಣ್ಣು ಮಗಳು ಅನ್ನೋದು ಸಂತಸದ ವಿಷಯ. ಮೇ 10, 1957 ರಂದು ತುಮಕೂರು ಜಿಲ್ಲೆಯ  ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. 

ಕಷ್ಟದ ಸಮಯದಲ್ಲಿ ಉಮಾಶ್ರೀ ಅವರ ಕೈ ಹಿಡಿದಿದ್ದು ರಂಗಭೂಮಿ. ಅಲ್ಲಿಂದ ಪ್ರಾರಂಭವಾದ ಅವರ ಜೀವನ ನೂರಾರು ಚಿತ್ರಗಳಲ್ಲಿ ನಟಿಸಿ, ಪ್ರತಿಭಾನ್ವಿತ ನಟಿ ಎಂಬ ಕೀರ್ತಿ ತಂದುಕೊಟ್ಟಿತ್ತು. ಹಲವಾರು ಪ್ರಶಸ್ತಿಗಳನ್ನ ತಂದುಕೊಟ್ಟಿತ್ತು. ಬಿ.ವಿ.ಕಾರಂತ್, ನಾಗಾಭರಣ, ಕೃಷ್ಣ ಸ್ವಾಮಿ  ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು ಉಮಾಶ್ರೀ ನಟಿಸಿದ್ದಾರೆ. ಸದ್ಯ ಅವರು ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಪುಟ್ಟಕ್ಕ ಮಕ್ಕಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

Author:

...
Keerthana J

Copy Editor

prajashakthi tv

share
No Reviews