ಗುಬ್ಬಿ :
ಮಂಗಳೂರು ಗಲಭೆ ಹಿನ್ನಲೆ ಗೃಹ ಮಂತ್ರಿ ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿದ್ದರು. ಆದರೆ ಅವರು ಒಂದು ಸಮುದಾಯವನ್ನು ಮಾತ್ರ ಮಾತನಾಡಿಸಿದ್ದು ಸರಿಯಿಲ್ಲ. ಮತ್ತೊಂದು ಸಮುದಾಯ ಮೃತ ಶೆಟ್ಟಿ ಅವರ ಮನೆಗೂ ಭೇಟಿ ನೀಡಿದ್ದರೆ ಸಾಮಾಜಿಕ ನ್ಯಾಯ ಕೊಡಿಸಿದಂತೆ ಆಗ್ತಿತ್ತು ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಗುಬ್ಬಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಎನ್.ಆರ್.ಎಲ್.ಎಂ ಶೆಡ್ ಹಾಗೂ ಬೇಲೂರು ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕ ದ್ವೇಷದ ಘಟನೆ ಆಗಿದ್ದರೂ ಒಂದು ಸಮುದಾಯ ಮಾತ್ರ ಓಲೈಕೆ ಮಾಡಿದ್ದು, ಮತ್ತೊಮ್ಮೆ ಗೃಹ ಸಚಿವರು ರುಜುವಾತು ಮಾಡಿದಂತಾಗಿದೆ. ಈ ಭೇಟಿಯ ತಾರತಮ್ಯ ನೀತಿ ಒಪ್ಪಿಕೊಳ್ಳಲಾಗದು ಎಂದು ಪ್ರತಿಕ್ರಿಯಿಸಿದರು.
ಇನ್ನು ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ಕೆಂಪಣ್ಣ, ಉಪಾಧ್ಯಕ್ಷೆ ರೇಷ್ಮಾ, ಸದಸ್ಯರಾದ ಕೃಷ್ಣೇಗೌಡ, ಗುರು ಪ್ರಕಾಶ್, ಲೋಕೇಶ್, ಅನ್ನಪೂರ್ಣ, ಈರಣ್ಣ, ವೆಂಕಟೇಶ್, ಕವಿತಾ, ಮಮತಾ ಸೇರಿದಂತೆ ಹಲವರು ಹಾಜರಿದ್ದರು.