ಗುಬ್ಬಿ:
ಗುಬ್ಬಿ ತಾಲೂಕಿನ ಸುರಿಗೇನಹಳ್ಳಿಯ ಬೆಟ್ಟದ ರಂಗನಾಥ ಸ್ವಾಮಿ ದೇಗುಲದಲ್ಲಿ ಕಳ್ಳರು ಕೈಚಳಕ ತೋರಿದ್ದು, ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಹಣ ಹಾಗೂ ಸಿಸಿ ಕ್ಯಾಮೆರಾಗೆ ಅಳವಡಿಸಿದ್ದ ಡಿವಿಆರ್ನನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ.
ರಾತ್ರಿ ರಂಗನಾಥ ಸ್ವಾಮಿ ದೇಗುಲದ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳರು ಹುಂಡಿಯನ್ನು ಹೊಡೆದು, ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಬೆಳಗ್ಗೆ ಅರ್ಚಕ ರಂಗೇಗೌಡ ಪೂಜೆಗೆಂದು ದೇವಸ್ಥಾನದ ಬಾಗಿಲು ತೆರೆದಾಗ ಕಳ್ಳರ ಕೈಚಳಕ ಬಯಲಾಗಿದೆ. ಇನ್ನು ಈ ದೇವಸ್ಥಾನ ಒಂದರಲ್ಲೇ ಬರೋಬ್ಬರಿ 6 ಬಾರಿ ಕಳ್ಳರು ಕಳ್ಳತನ ಮಾಡಿರೋದು ಗ್ರಾಮಸ್ಥರ ನಿದ್ದೆಗೆಡಿಸುಂತೆ ಮಾಡಿದೆ.
ಕಳೆದ 5 ದಿನಗಳ ಹಿಂದೆಯಷ್ಟೇ ದೇವಸ್ಥಾನದ ಹುಂಡಿಯ ಹಣ ಲೆಕ್ಕಮಾಡಿ ಎಲ್ಲಾ ಹಣವನ್ನು ಬ್ಯಾಂಕ್ ನಲ್ಲಿ ಇಡಲಾಗಿದೆ. ಹೀಗಾಗಿ ಹೆಚ್ಚಿನ ಹಣ ದೋಚುವ ಕಳ್ಳರ ಕೈಚಳಕ ವಿಫಲವಾಗಿದೆ, ಒಂದೇ ದೇವಸ್ಥಾನದಲ್ಲಿ ಸತತ ಆರು ಬಾರಿ ಕಳ್ಳತನ ನಡೆದಿದ್ದು, ಈಗಲಾದರೂ ಗುಬ್ಬಿ ಪೊಲೀಸರು ಎಚ್ಚೆತ್ತು ಕಳ್ಳರನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡಬೇಕಿದೆ.