ದಾವಣಗೆರೆ:
ಈ ವರ್ಷದ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು,ಶೇ.62.34 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಮಧ್ಯೆ ದಾವಣಗೆರೆ ಶಾಂತಾ ಎಂಬ ಬಾಲಕಿ ಚಿಕ್ಕ ವಯಸ್ಸಿನಲ್ಲಿಯೇ, ಕ್ಯಾನ್ಸರ್ ನಿಂದ ಬಳಲಿ, ಒಂದು ವರ್ಷ ಶಾಲೆಗೆ ಹೋಗಲು ಸಾಧ್ಯವಾಗದಿದ್ದರೂ, ಶೇ.93.44 ಅಂಕಗಳೊಂದಿಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಉತ್ತಿರ್ಣಳಾಗಿದ್ದಾಳೆ. ಆ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ.
ದಾವಣಗೆರೆ ನಗರದ ನಿಟ್ಟುವಳ್ಳಿಯ ಪಿಎಂ ಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ. ಶಾಂತಾ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 93.44 ಅಂಕ ಗಳಿಸಿದ್ದಾಳೆ.ಕ್ಯಾನ್ಸರ್ ಕಾಟದ ನಡುವೆಯೂಸಹ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಗಮನಾರ್ಹ ಸಾಧನೆಮಾಡಿದ್ದಾಳೆ. ಆ ಬಾಲೆಗೆ ಚಿಕ್ಕ ವಯಸ್ಸಿನಲ್ಲೇ ಮಹಾಮಾರಿ ಕ್ಯಾನ್ಸರ್ ನಿಂದ ಬಳಲಿದ್ದಲೂ. ಆದರೆ ಜೀವನದಲ್ಲಿ ಹಠ ಎಂಬುದು ಮಾತ್ರ ಕಡಿಮೆ ಆಗಿರಲಿಲ್ಲ. ಈ ಕಾರಣಕ್ಕೆ ಒಂದು ವರ್ಷ ಶಾಲೆಗೂ ಗೈರು ಕೂಡ ಆಗಿದ್ದಳು. ಅನಾರೋಗ್ಯದ ನಡುವೆಯೂ ಪರೀಕ್ಷೆಯನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ದಾವಣಗೆರೆ ನಗರದ ನಿಟ್ಟುವಳ್ಳಿ ಬಸವರಾಜು ಹಾಗೂ ಆಶಾ ದಂಪತಿಯ ಮೊದಲ ಪುತ್ರಿ ಬಿ. ಶಾಂತಾ ಕನ್ನಡ ವಿಷಯದಲ್ಲಿ 122, ಇಂಗ್ಲೀಷ್ ನಲ್ಲಿ85, ಹಿಂದಿಯಲ್ಲಿ90, ಸಮಾಜದಲ್ಲಿ94, ವಿಜ್ಞಾನದಲ್ಲಿ 99 ಹಾಗೂ ಗಣಿತದಲ್ಲಿ94, ಒಟ್ಟು 584 ಅಂಕ ಗಳಿಸಿದ್ದಾರೆ. ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಇನ್ನು ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಿ. ಶಾಂತಾ ತಮ್ಮ ಮನೆಯವ್ರು, ವಿಶೇಷವಾಗಿ ಶಿಕ್ಷಕರು ಹಾಗೂ ಸಮಾಜದವರ ಸಹಕಾರದಿಂದ ಸದ್ಯ ಮಹಾಮಾರಿ ಕ್ಯಾನ್ಸರ್ ಗೆದ್ದಿದ್ದಾಳೆ. ಬಿ. ಶಾಂತಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಮುಂದುರೆಸಲಿದ್ದು, ಭವಿಷ್ಯದಲ್ಲಿ ಕೆಎಎಸ್ ಇಲ್ಲವೇ ಐಎಎಸ್ ಮಾಡಿ, ಸಮಾಜ ಸೇವೆ ಮಾಡುವ ಅಭಿಲಾಷೆ ಹೊಂದಿದ್ದಾಳೆ. ಆ ಮೂಲಕ ಸಮಾಜದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವಾಗುವ ಇಚ್ಛೆ ಶಾಂತಾ ಅವರದ್ದಾಗಿದೆ.