ತಿಪಟೂರು : ಬೆಂಕಿಗಾಹುತಿಯಾದ ಚಿರತೆ ಪ್ರಕರಣ | ಮಾಹಿತಿ ಪಡೆದ ಅರಣ್ಯ ಇಲಾಖೆ

ತಿಪಟೂರು:

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಮದ್ಲೇಹಳ್ಳಿಯ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿತ್ತು. ಆದರೆ ಬೆಂಕಿ ಅವಘಡದಲ್ಲಿ ಚಿರತೆ ಸುಟ್ಟು ಕರಕಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಯ DFO ಅನುಪಮಾ ಮಾಹಿತಿ ಪಡೆದುಕೊಂಡಿದ್ದಾರೆ. ಮದ್ಲೇಹಳ್ಳಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆ ನಾರಾಯಣಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿತ್ತು. ಬೆಂಕಿ ಪಕ್ಕದ ಗುಡ್ಡದಿಂದ ಹಬ್ಬಿದೆ. ಸುಮಾರು 70 ಎಕರೆ ಜಮೀನಲ್ಲಿದ್ದ ತೆಂಗು ಸೇರಿದಂತೆ ಹಲವು ಬೆಳೆಗಳು ಬೆಂಕಿಗಾಹುತಿಯಾಗಿವೆ. ಇದರಲ್ಲಿ ಇಲಾಖೆ ಸಿಬ್ಬಂದಿಗಳ ಲೋಪ ಕಂಡು ಬಂದಿಲ್ಲ. ಬೆಳಗ್ಗೆ 10 ಹಾಗೂ ಮಧ್ಯಾಹ್ನ 12 ಗಂಟೆಗೆ ಪರಿಶೀಲನೆ ನಡೆಸಲಾಗಿತ್ತು, ಆದರೆ ಆಗ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಇದಾದ ಬಳಿಕ ಈ ದುರಂತ ಸಂಭವಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಅರಣ್ಯೇತರ ಜಾಗದಲ್ಲಿ ದುರಂತ ನಡೆದಿದೆ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಹ ತಿಳಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews