ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಡೆಡ್ಲಿ ಬೈಕ್‌ ವ್ಹೀಲಿಂಗ್‌ | ಪುಂಡರ ವಿರುದ್ಧ ಎಫ್‌ಐಆರ್‌

ಚಿಕ್ಕಬಳ್ಳಾಪುರ : ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಅಡ್ಡದಾರಿಗಳನ್ನು ಹಿಡಿದು ಗಾಂಜಾ, ಅಫೀಮ್‌, ಡ್ರಿಂಕ್ಸ್‌ ಅಂತ ಅಡಿಕ್ಟ್‌ ಆಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದ್ರ ನಡುವೆ ಮಗಾ, ಮಚ್ಚಾ ಅಂತ ಬೈಕ್‌ ಹುಚ್ಚು ಹಿಡಿಸಿಕೊಂಡು ಬೈಕ್‌ ವೀಲಿಂಗ್‌ ಮಾಡಿ ಪ್ರಾಣ ಕಳೆದುಕೊಳ್ತಿದ್ದಾರೆ. ಮತ್ತೆ ಕೆಲವರು ಕಂಬಿ ಎಣಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಮಾಧ್ಯಮದಲ್ಲಿ ಪ್ರಕಟವಾಗ್ತಿದ್ರು ಕೂಡ ಯುವಕರ ವೀಲಿಂಗ್‌ ಹುಚ್ಚಾಟಕ್ಕೆ ಬ್ರೇಕ್‌ ಬಿದ್ದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಯುವಕರು ಬೈಕ್‌ ವೀಲಿಂಗ್‌ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.

ಹೌದು, ಚಿಕ್ಕಬಳ್ಳಾಪುರದ ವಿದುರಾಶ್ವತ್ಥ ಹಾಗೂ ಹಿಂದುಪುರ ರಸ್ತೆಯಲ್ಲಿ ಇಬ್ಬರು ಯುವಕರು ಅಪಾಯಕಾರಿ ಬೈಕ್ ವೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದರು. ಇವರ ವೀಲಿಂಗ್‌ ಹುಚ್ಚಿಗೆ ಸವಾರರು ಸಂಕಷ್ಟಕ್ಕೆ ಸಿಲುಕಿದ್ರು. ಆದ್ರೆ ಇದ್ಯಾವುದನ್ನು ಲೆಕ್ಕಸದ ಯುವಕರು ಮಾತ್ರ ವೀಲಿಂಗ್‌ ಮಾಡುತ್ತ ಮೋಜು-ಮಸ್ತಿ ಮಾಡಿದ್ರು. ಆದ್ರೆ ಬೈಕ್‌ ವೀಲಿಂಗ್‌ ಮಾಡಿದ್ದ ಇಬ್ಬರು ಪುಂಡರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿತ್ತು.

ಈಗೆ ಬೈಕ್ ವೀಲಿಂಗ್ ಮಾಡಿ ರಸ್ತೆಯಲ್ಲಿ ಹುಚ್ಚಾಟವಾಡಿದ್ದ ಪುಂಡರಿಗೆ ಗೌರಿಬಿದನೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ವಿಡಿಯೋ ಆದರಿಸಿ ಪೋಲಿಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಪುಂಡರ ಎಡೆಮುರಿ ಕಟ್ಟಿದ್ದಾರೆ. ಇಂದು ಇಬ್ಬರು ಯುವಕರನ್ನು ಬಂಧಿಸಿ, ವೀಲಿಂಗ್‌ ಗೆ ಬಳಸಿದ್ದ ಬೈಕ್‌ ವಶಪಡೆದುಕೊಂಡು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನ ಗೌರಿಬಿದನೂರು ಮೂಲದ  19 ವರ್ಷದ  ಅಜಯ್ ಹಾಗೂ ಮಹಮ್ಮದ್ ಹೂಸೇನ್  ಎನ್ನಲಾಗಿದೆ.

ಬೈಕ್‌ ವೀಲಿಂಗ್‌ ಹುಚ್ಚಿನಿಂದಾಗಿ ಯಾವಾಗ ಬೇಕಾದರೂ ಪ್ರಾಣ ಹೋಗಬಹುದು. ಇಲ್ಲವೇ ಕೈಕಾಲು ಮುರಿದುಕೊಂಡು ಮೂಲೆಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಬೈಕ್‌ ವೀಲಿಂಗ್‌ ಮಾಡದಂತೆ  ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದೆ. ಆದ್ರೆ ಇಂದಿನ ಯುವಜನತೆ ಮಾತ್ರ ಈ ಕ್ರೇಜ್‌ ಬಿಡುತ್ತಿಲ್ಲ.  ಇನ್ನು ಇವರು ಸಾಯುವುದಲ್ಲದೆ ಹೆತ್ತವರನ್ನು ಮಾನಸಿಕವಾಗಿ ಸಾಯಿಸುತ್ತಿದ್ದಾರೆ. ಇಂತಹ ಪುಂಡರಿಗೆ ಮತ್ತಷ್ಟು ಬಿಸಿ ಮುಟ್ಟಿಸುವ ಕಾರ್ಯವಾಗಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews