ಶಿರಾ:
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆ ಗಂಗೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆಯಡಿ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಮನೆಗಳ ಮುಂದೆ ನಲ್ಲಿ ಹಾಕಲಾಗ್ತಿದೆ. ಆದ್ರೆ ನಲ್ಲಿಗಳಲ್ಲಿ ಈವರೆಗೂ ನೀರು ಮಾತ್ರ ಬರ್ತಾ ಇಲ್ಲ ಜೊತೆಗೆ ಕಾಮಗಾರಿ ಮುಗಿಯುವ ಲಕ್ಷಣವೂ ಕಾಣ್ತಾ ಇಲ್ಲ… ಇದ್ರಿಂದ ನೀರಿನ ಸಂಪರ್ಕಕ್ಕಾಗಿ ತೆಗೆದಿದ್ದ ಗುಂಡಿಗಳಿಂದ ಗ್ರಾಮದ ಜನರಿಗೆ ತೋಂದ್ರೆ ಆಗ್ತಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ವ್ಯಾಪ್ತಿಯ ಕಿಲಾರದಹಳ್ಳಿ ತಾಂಡದಲ್ಲಿ ಮನೆ ಮನೆ ಗಂಗೆ ಯೋಜನೆಯಡಿಯಲ್ಲಿ ಮನೆಗಳ ಮುಂದೆ ನಲ್ಲಿಗಳನ್ನು ಹಾಕಲಾಗಿದೆ. ಆದ್ರೆ ಈ ಹಿಂದೆ ನಲ್ಲಿಗಳಲ್ಲಿ ನೀರು ಬರ್ತಾ ಇತ್ತಂತೆ.. ಆದ್ರೆ ಈಗ ನೀರು ಬರ್ತಾ ಇಲ್ಲ̧̤̤ ಅಲ್ದೇ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ಬರುತ್ತಿದ್ದ ನೀರು ಸಹ ಕಾಮಗಾರಿ ಸಂದರ್ಭದಲ್ಲಿ ಪೈಪ್ ಲೈನ್ ಕಿತ್ತುಹೋಗಿ ಅದರಲ್ಲಿಯೂ ಸಹ ನೀರು ಸರಬರಾಜು ಹಾಗ್ತಿಲ್ಲ ಅಂತಾ ಜನರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.
ಒಂದ್ಕಡೆ ನೀರು ಬರ್ತಾ ಇಲ್ಲ.. ಮತ್ತೊಂದ್ಕಡೆ ಮನೆ ಮನೆ ಗಂಗೆ ಯೋಜನೆಗಾಗಿ ತೆಗೆಯಲಾಗಿದ್ದ ಹಳ್ಳ- ಗುಂಡಿಗಳನ್ನು ಮುಚ್ಚಲಾಗಿಲ್ಲ. ಇದ್ರಿಂದ ಗ್ರಾಮದಲ್ಲಿ ವಾಹನಗಳು ಓಡಾಡಲು ಸಮಸ್ಯೆ ಆಗ್ತಿದೆ. ಜೊತೆಗೆ ಚಿಕ್ಕ ಚಿಕ್ಕ ಮಕ್ಕಳು ಓಡಾಡಲು ಕಷ್ಟ ಆಗ್ತಾ ಇದೆ. ಗುಂಡಿ ತೆಗೆದು ತಿಂಗಳುಗಳೇ ಕಳೆದ್ರು ಇನ್ನು ಮುಚ್ಚಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಇಷ್ಟಲ್ಲದೇ ಗುಂಡಿ ಮುಚ್ಚದಿರೋದ್ರಿಂದ ಧೂಳು ಏಳುತ್ತಿದ್ದು ಗ್ರಾಮಸ್ಥರಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಬೀತಿ ಶುರುವಾಗಿದೆ.