ತುಮಕೂರು : ತುಮಕೂರಿನಲ್ಲಿ ರಾಗಿ ಖರೀದಿಸಲು ಖರೀದಿ ಕೇಂದ್ರ ಸ್ಥಾಪನೆ

ಎಪಿಎಂಸಿ ಮಾರುಕಟ್ಟೆಯಲ್ಲಿ ರಾಗು ಖರೀದಿ ಕೇಂದ್ರಕ್ಕೆ ಡಿಸಿ ಶುಭಕಲ್ಯಾಣ್‌ ಭೇಟಿ ನೀಡಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ರಾಗು ಖರೀದಿ ಕೇಂದ್ರಕ್ಕೆ ಡಿಸಿ ಶುಭಕಲ್ಯಾಣ್‌ ಭೇಟಿ ನೀಡಿದರು.
ತುಮಕೂರು

ತುಮಕೂರು:

ತುಮಕೂರು ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಉತ್ಪಾದನೆ ಈ ಬಾರಿ ಹೆಚ್ಚಾಗಿದೆ. ಉತ್ತಮ ಮಳೆಯಾಗಿದ್ದರಿಂದ ಸಮೃದ್ಧಿಯಾದ ರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟ ಮಾಡಲು ರೈತರು ಉತ್ಸಾಹ ತೋರುತ್ತಿದ್ದಾರೆ. ತುಮಕೂರಿನಲ್ಲಿ ರಾಗಿ ಖರೀದಿಸಲು ಜಿಲ್ಲಾಡಳಿತ ವತಿಯಿಂದ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ತುಮಕೂರು ಜಿಲ್ಲೆಯ 10 ರಾಗಿ ನೋಂದಣಿ ಕೇಂದ್ರಗಳಲ್ಲಿ ಸುಮಾರು 51 ಸಾವಿರದ 948 ಮಂದಿ ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಡಿಸೆಂಬರ್‌ನಿಂದಲೇ ನೋಂದಣಿ ಶುರುವಾಗಿದ್ದು, ರಾಗಿ ಬೆಳೆಗಾರರು ಚೀಲದಲ್ಲಿ ರಾಗಿ ತುಂಬಿಕೊಂಡು, ಬಿಸಿಲು, ಚಳಿಯೆನ್ನದೆ ಖರೀದಿ ಕೇಂದ್ರಕ್ಕೆ ಸಾಲುಗಟ್ಟಿ ಬರ್ತಿದ್ದಾರೆ. ರಾಗಿಗೆ ಬೆಂಬಲ ಬೆಲೆ ಕೂಡ ಘೋಷಣೆ ಮಾಡಿದ್ದು ಪ್ರತಿ ಕ್ವೀಂಟಾಲ್‌ ರಾಗಿಗೆ 4 ಸಾವಿರದ 290 ರೂಪಾಯಿಯನ್ನು ಘೋಷಣೆ ಮಾಡಿದ್ದು, ಇನ್ನು ದಿನದಿಂದ ದಿನಕ್ಕೆ ರಾಗಿ ಬೆಳೆಗಾರರು ಖರೀದಿ ಕೇಂದ್ರದತ್ತ ಬರುವವರ ಸಂಖ್ಯೆ ಹೆಚ್ಚಾಗಿದ್ದು ಅವರಿಗೆ ಮೂಲಭೂತ ಸೌಕರ್ಯದ ಅವಶ್ಯಕತೆ ಇತ್ತು.

ನಿನ್ನೆ ಎಪಿಎಂಸಿ ಮಾರುಕಟ್ಟೆಯಲ್ಲಿರೋ ರಾಗಿ ಖರೀದಿ ಕೇಂದ್ರಕ್ಕೆ ಡಿಸಿ ಶುಭಕಲ್ಯಾಣ್‌ ಭೇಟಿ ನೀಡಿದ್ದರು. ಈ ವೇಳೆ ರೈತರು ಸುಡು ಬಿಸಿಲನ್ನು ಲೆಕ್ಕಿಸದೇ ರಾಗಿ ಮಾರಾಟ ಮಾಡಲು ಜಮಾಯಿಸಿದರು. ಇದನ್ನು ಕಂಡ ಡಿಸಿ ಶುಭಕಲ್ಯಾಣ್‌ ರೈತರಿಗೆ ಅನುಕೂಲವಾಗುವಂತೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು. ಅಲ್ಲದೇ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ತಿಳಿಸಿದರು.

ಇನ್ನು ಡಿಸಿ ಸೂಚನೆ ನೀಡುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಇಂದು ಮುಂಜಾನೆಯೇ ರಾಗಿ ಖರೀದಿ ಕೇಂದ್ರದ ಬಳಿ ನೆರಳಿಗಾಗಿ ಶಾಮೀಯಾನದ ವ್ಯವಸ್ಥೆಯನ್ನು ಮಾಡಿದ್ದಾರೆ. ಅಲ್ಲದೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಇದರಿಂದ ಬಿಸಿಲಿನಿಂದ ಕಂಗೆಟ್ಟಿದ್ದ ರೈತರಿಗೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.

Author:

...
Editor

ManyaSoft Admin

Ads in Post
share
No Reviews