CRICKET :
ಐಪಿಎಲ್ ದ್ವಿತೀಯಾರ್ಧದ ಪಂದ್ಯಗಳು ಮೇ 17ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ ಸಿಬಿಗೆ ಇದೀಗ ಬೃಹತ್ ಬಲ ಸಿಕ್ಕಿದ್ದು, ಮೂವರು ವಿದೇಶಿ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಯುದ್ಧ ಭೀತಿಯಿಂದ ತವರಿಗೆ ಹಿಂತಿರುಗಿದ್ದ ವೆಸ್ಟ್ ಇಂಡೀಸ್ ರೊಮಾರಿಯೊ ಶೆಫರ್ಡ್ ಈಗ ಭಾರತಕ್ಕೆ ಆಗಮಸಿದ್ದಾರೆ. ಇನ್ನು ಶೆಫರ್ಡ್ ಆರ್ಸಿಬಿಯ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂಗ್ಲೆಂಡಿನ ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಯುವ ಆಟಗಾರ ಜೇಕಬ್ ಬೆಥೆಲ್ ತಂಡದೊಂದಿಗೆ ತಯಾರಿ ಆರಂಭಿಸಿದ್ದಾರೆ. ಈ ಇಬ್ಬರು ಆಟಗಾರರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಆಡಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧ ಆರ್ಸಿಬಿ ಪರ ಬೆಥೆಲ್ ಇನಿಂಗ್ಸ್ ಆರಂಭಿಸುವುದನ್ನು ಎದುರು ನೋಡಬಹುದು.