ದೊಡ್ಡಬಳ್ಳಾಪುರ : ಕಾಂಪೌಂಡರ್ ಆಗಿದ್ದವನೇ ಈಗ ಡಾಕ್ಟರ್..!

ನಕಲಿ ಡಾಕ್ಟರ್
ನಕಲಿ ಡಾಕ್ಟರ್
ತುಮಕೂರು

ದೊಡ್ಡಬಳ್ಳಾಪುರ:

ದೊಡ್ಡಬಳ್ಳಾಪುರದಲ್ಲಿ ನಕಲಿ ಡಾಕ್ಟರ್‌ಗಳ ಹವಾ ಮಾತ್ರ ನಿಲ್ತಾ ಇಲ್ಲ, ಹೆಸರಿಗೆ ಮಾತ್ರ ವೈದ್ಯರು ಆದರೆ ಇವರು ನಿಜವಾದ ಡಾಕ್ಟರ್‌ಗಳು ಅಲ್ಲವೇ ಅಲ್ಲ. ಕಾಂಪೌಂಡರ್‌ ಆಗಿದ್ದವರು ಮನೆಯಲ್ಲೇ ಆಸ್ಪತ್ರೆ ಶುರು ಮಾಡಿ ಚಿಕಿತ್ಸೆ ಕೊಡ್ತಾ ಇದ್ದಾರೆ. ನಕಲಿ ಡಾಕ್ಟರ್‌ ಹಾವಳಿ ಬಗ್ಗೆ ಪ್ರಜಾಶಕ್ತಿ ವರದಿ ಮಾಡಿದರೂ ಕೂಡ ಇನ್ನು ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ಕಾಣ್ತಿಲ್ಲ. ಇದೀಗ ಮತ್ತೊಂದು ನಕಲಿ ಡಾಕ್ಟರ್‌ಗಳ ಬಣ್ಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತಾ ಇದೆ. ಇನ್ನು ಡಾಕ್ಟರ್‌ ಅಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆಯೇ ಇಲ್ಲ ದೊಡ್ಡಬಳ್ಳಾಪುರಕ್ಕೆ ಬಂದರೆ ಸಾಕು ಡಾಕ್ಟರ್‌ ಆಗಬಹುದು ಎಂಬುದು ಸಾಬೀತಾಗ್ತಾ ಇದೆ.

ಈತನೇ ಹೇಳುವ ಹಾಗೆ ನಾನು ಡಾಕ್ಟರ್ ಅಲ್ವೇ ಅಲ್ಲ ಅಂತ ಒಪ್ಪಿಕೊಂಡಿದ್ದಾನೆ. ಮುಂಚೆ ದೊಡ್ಡ ಬೆಳವಂಗಲದಲ್ಲಿ ಒಬ್ಬ ಡಾಕ್ಟರ್ ಬಳಿ ಕಾಂಪೌಂಡರ್ ಆಗಿ ಕೆಲಸ ಮಾಡ್ತಿದ್ದ ಇವನು ಈಗ ಸ್ವತಃ ತಾನೇ ಡಾಕ್ಟರ್ ಆಗಿ ಚಿಕಿತ್ಸೆ ನೀಡ್ತಾ ಇದ್ದಾನೆ. ಈಗ ಇಲ್ಲಿನ ಪ್ರತಿಷ್ಠಿತ ಜಾಲಪ್ಪ ಕಾಲೇಜು ಮುಂಭಾಗ ಒಂದು ಮನೆಯಲ್ಲಿ ಕ್ಲಿನಿಕ್‌ ಅನ್ನು ಓಪನ್ ಮಾಡಿದಾನೆ. ನಿನ್ ಮಾಡೋ ಕೆಲಸದಿಂದ ಯಾರಿಗಾದರೂ ತೊಂದರೆ ಆದರೆ ಏನ್ ಮಾಡುತ್ತಿಯಾ ಅಂದರೆ ಈತ  30 ವರ್ಷದಿಂದ ಟ್ರೀಟ್ಮೆಂಟ್ ಕೊಡ್ತಾ ಇದೀನಿ ಯಾರಿಗೂ ಏನು ತೊಂದರೆ ಆಗಿಲ್ಲ. ನಾನು ತಗೋಳೋದೆ 50 ರೂಪಾಯಿ ಫೀಸು ಅಂತ ಹೇಳತಾನೆ. ಅಷ್ಟೇ ಯಾಕೆ ಯಾವ ಅಧಿಕಾರಿಗಳು ಬಂದು ಕೇಳಲ್ವಾ ಅಂದರೆ ಅಯ್ಯೋ ಬಿಡಿ ಸರ್‌ ಇದು ಅವರಿಗೂ ಗೊತ್ತು ಅಂತಾ ಹೇಳ್ತಾನೆ.

ನಕಲಿ ಡಾಕ್ಟರ್‌ ಆಗಲು ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅಂತಾ ಅನಿಸುತ್ತೆ. ಇನ್ನು ಇದೊಂದೇ ಅಲ್ಲದೆ ಊರ ತುಂಬಾ ಕ್ಲಿನಿಕ್ ಗಳೇ ಇವೆ. ಶೇಕಡಾ 80 % ರಷ್ಟು BAMS ವೈದ್ಯರೆ. MBBS ವೈದ್ಯರಂತೇ ಆಯುರ್ವೇದಿಕ್ ಟ್ರೀಟ್ಮೆಂಟ್ ಕೊಡ್ತಾ ಇದ್ದಾರೆ. ನಗರದ ಮಧ್ಯ ಭಾಗ ಬಸ್ ಸ್ಟಾಂಡ್ ಹತ್ತಿರ ಫೇಮಸ್ ಕ್ಲಿನಿಕ್ ಕೂಡ BAMS ಬೋರ್ಡ್ ಹಾಕೊಂಡ್ ಇಂಗ್ಲೀಷ್‌ ಮೆಡಿಸಿನ್‌ ಕೊಡ್ತಾ ಇದ್ದರಂತೆ. ಇದು ಕಣ್ಣಿಗೆ ಕಂಡದ್ದು. ಇಂತಹ ನಿರ್ಲಕ್ಷ್ಯದಿಂದ ಕಾಣದ ಹಾಗೆ ನಡೆದಿರೋ ಘಟನೆಗಳು ಇನ್ನು ಈ ನಗರದಲ್ಲಿ ಅದೆಷ್ಟು ಇದ್ಯೋ ಆ ದೇವರೇ ಬಲ್ಲ.

ಇನ್ನು ಕಳೆದ ಬಾರಿ ನಮ್ಮ ಪ್ರಜಾಶಕ್ತಿ ಮಾಡಿದ ಸ್ಟಿಂಗ್‌ ಆಪರೇಷನ್ ಅಲ್ಲಿ ನಕಲಿ ಡಾಕ್ಟರ್‌ ಹವಾ ಬಗ್ಗೆ ತೋರಿಸಿದರೂ ಕೂಡ ಯಾವ ಕ್ರಮ ಕೈ ಗೊಂಡಿಲ್ಲ. ಹೆಸರಿಗಷ್ಟೇ ಒಂದು ಕ್ಲಿನಿಕ್ ಮುಚ್ಚಿಕೊಂಡು ಹೊಯ್ತು ಅಷ್ಟೇ ಆದರೆ ಈ ಥರ ನಾಯಿಕೊಡೆಗಳಂತೆ ಬೆಳದಿರೋ ಕ್ಲಿನಿಕ್ ಆಸ್ಪತ್ರೆಗಳ ಬಗ್ಗೆ ಇಲ್ಲಿನ ಅಧಿಕಾರಿಗಳು, ಶಾಸಕರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ.

 

Author:

...
Editor

ManyaSoft Admin

Ads in Post
share
No Reviews