ತಿಪಟೂರು:
ಹೆಣ್ಣು ಮನೆಯ ಕಣ್ಣು, ಮನೆಗೆ ಆಧಾರ ಆದ್ರೆ ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋದು ಮತ್ತೆ ಮತ್ತೆ ಪ್ರೂ ಆಗ್ತಾನೆ ಇದೆ. ಅದ್ರಲ್ಲೂ ಅತ್ತೆ- ಸೊಸೆಯಂದಿರು ಬದ್ಧ ವೈರಿಗಳಂತೆ ಹಗೆ ಸಾಧಿಸೋದನ್ನ ಅಲ್ಲಲ್ಲಿ ನೋಡ್ತಾನೆ ಇರ್ತೀವಿ. ಕೆಲವೊಂದು ಮನೆಗಳಲ್ಲಿ ಅತ್ತೆ- ಸೊಸೆ, ಅಮ್ಮ- ಮಗಳಂತೆ ಆತ್ಮೀಯತೆಯಿಂದಲೂ ಇರ್ತಾರೆ.. ಆದ್ರೆ ಇಲ್ಲೋಬ್ಬ ಸೊಸೆಯ ಬಾಳಿಗೆ ಅತ್ತೆಯೇ ವಿಲನ್ ಆಗಿದ್ದಾಳೆ. ಹೌದು ಅತ್ತೆಯ ಕಾಟಕ್ಕೆ ಸೊಸೊಯೊಬ್ಬಳು ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಪಾಲಾಗಿದ್ದಾಳೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬೀರಸಂದ್ರ ಗ್ರಾಮದಲ್ಲಿ ಅತ್ತೆಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗ್ರಾಮದ ಸುಮಲತಾ ಎಂಬ 37 ವರ್ಷದ ಸುಮಲತಾ ಎಂಬ ಮಹಿಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಗ್ರಾಮದವರು ಹಾಗೂ ಸುಮಲತಾ ತಾಯಿ ಆಕೆಯನ್ನು ಕೆ.ಬಿ ಕ್ರಾಸ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.
ಇನ್ನು ಒಂದೂವರೆ ವರ್ಷದ ಹಿಂದೆ ಸುಮಲತಾ ಅವಳ ಗಂಡ ತೀರಿಹೋಗಿದ್ದು, ಅಂದಿನಿಂದ ಅತ್ತೆ ಲಕ್ಕಮ್ಮ, ಚಿಕ್ಕಮ್ಮ ನೀಲಮ್ಮ ಹಾಗೂ ಅವರ ಮಗ ವಿಜಯಕುಮಾರ್ ಎಂಬುವವರು ನಿತ್ಯ ಸುಮಲತಾಗೆ ಕಿರುಕುಳ ನೀಡ್ತಾ ಇದ್ರು ಎನ್ನಲಾಗಿದೆ. ಇತ್ತೀಚಿಗೆ ಸುಮಲತಾಗೆ ಅತ್ತೆ ಸೇರಿ ಮೂವರು ಬಾಯಿಗೆ ಬಂದಂತೆ ಬೈದು, ಮನೆಯಿಂದ ಆಚೆ ಹಾಕಿದ್ರು ಎನ್ನಲಾಗಿದ್ದು ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತಂತೆ. ಆದ್ರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನೆ ಆಗಿದ್ದು ಇದ್ರಿಂದ ಮನನೊಂದ ಸೊಸೆ ಸುಮಲತಾ ಮೆಣಸಿನ ಕಾಯಿ ಗಿಡಕ್ಕೆ ತಂದಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.