ಕ್ರಿಕೆಟ್:
ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯೆರಡು ಸ್ಥಾನಗಳಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ನತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಚನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಉಭಯ ತಂಡಗಳು 8 ಪಂದ್ಯಗಳನ್ನು ಆಡಿದ್ದು, ಕೇವಲ 2 ಜಯ ದಾಖಲಿಸಿದೆ. ಮೂರನೇ ಗೆಲುವಿಗಾಗಿ SRH ಹಾಗೂ CSK ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ.
ಉಭಯ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿ 21 ಬಾರಿ ಮುಖಾಮುಖಿ ಆಗಿದ್ದು, ಚೆನ್ನೈ 15, ಎಸ್‌ಆರ್‌ಎಚ್ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆಡಿರುವ 8 ಪಂದ್ಯಗಳಿಂದ ಕೇವಲ 2 ಪಂದ್ಯಗಳನ್ನು ಗೆದ್ದಿರುವ ತಂಡಗಳಿಗೆ ಇನ್ನು ಪ್ರತಿಯೊಂದು ಸೋಲೂ ದುಬಾರಿಯಾಗಿ ಪರಿಣಮಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಧೋನಿ ಶೇಖ್ ರಶೀದ್, ರಚಿನ್ ರವೀಂದ್ರ, ಆಯುಷ್ ಮ್ಹಾತ್ರೆ, ರವೀಂದ್ರ ಜಡೇಜಾ, ಶಿವಂ ದುಬೆ, ವಿಜಯ್ ಶಂಕರ್, ಜೇಮಿ ಓವರ್‌ಟನ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಣ ಅಂಶುಲ್ ಕಾಂಬೋಜ್ ಇದ್ದಾರೆ.
ಇನ್ನು ನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ಯಾಟ್ ಕಮ್ಮಿನ್ಸ್, ಅಭಿಷೇಕ್ ಶರ್ಮಾ, ಟ್ರಾವಿಸ್ ಮುಖ್ಯಸ್ಥ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಎಶನ್ ಮಾಲಿಂಗ, ಅಭಿನವ್ ಮನೋಹರ್ ಇದ್ದಾರೆ.