ಸಿನಿಮಾ : ಬಾಲಿವುಡ್‌ನ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತಮ್ಮ ಅದ್ಭುತ ಸಾಂಪ್ರದಾಯಿಕ ಲುಕ್ನಿಂದ ಎಲ್ಲರ ದೃಷ್ಟಿ ಸೆಳೆದಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ, ಸಿಂಧೂರ ಹಣೆಗಿಟ್ಟ ನಟಿ, ರೆಡ್ ಕಾರ್ಪೆಟ್‌ನಲ್ಲಿ ನಗುತ್ತಾ ಕೈ ಮುಗಿದು ನಮಸ್ಕಾರ ಸಲ್ಲಿಸಿದ್ಧಾರೆ.
ಈ ಮೂಲಕ, ಇತ್ತೀಚೆಗಾಗಲೇ ಕೇಳಿಬಂದಿದ್ದ ಅವರ ವಿವಾಹ ಜೀವನ ಕುರಿತ ವದಂತಿಗಳಿಗೆ ನೇರವಾಗಿ ತಕ್ಕ ಉತ್ತರ ನೀಡಿದಂತಾಯಿತು. "ಐಶ್ವರ್ಯಾ-ಅಭಿಷೇಕ್ ದಾಂಪತ್ಯದಲ್ಲಿಲ್ಲ" ಎಂಬ ಗಾಸಿಪ್‌ಗಳಿಗೆ ಈ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ.
ಮೇ 13ರಿಂದ ಆರಂಭಗೊಂಡು, ಮೇ 24ರವರೆಗೆ ನಡೆಯುವ ಈ ಗ್ಲೋಬಲ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಕೆಲವೇ ಕೆಲವರಿಗಷ್ಟೇ ಆಹ್ವಾನ ನೀಡಲಾಗುತ್ತದೆ. ಈ ವರ್ಷದ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ಜೊತೆ ಕನ್ನಡ ನಟಿಯರು ದಿಶಾ ಮದನ್, ಪ್ರಣಿತಾ ಸುಭಾಷ್, ಜೊತೆಗೆ ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಮೌನಿ ರಾಯ್ ಮೊದಲಾದವರು ಭಾಗಿಯಾಗಿದ್ದಾರೆ.
ಈ ಭಾಗವಹಿಸುವಿಕೆ ಐಶ್ವರ್ಯಾರಿಗಿಂತ ಮೊದಲನೇ ಸಾರಿ ಅಲ್ಲ. ಕಳೆದ ವರ್ಷವೂ ಅವರು ತಮ್ಮ ಮಗಳು ಆರಾಧ್ಯ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಮಗಳು ಆರಾಧ್ಯ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಅಮ್ಮನ ರೆಡ್ ಕಾರ್ಪೆಟ್‌ನಲ್ಲಿ ವಾಕ್ ನೋಡಿ ಖುಷಿಪಟ್ಟಿದ್ದರು.