TUMAKURU: CITU ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಣೆ

ತುಮಕೂರು: 

ಇಂದು ವಿಶ್ವ ಕಾರ್ಮಿಕ ದಿನಾಚರಣೆ ಇದ್ದು, ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ತುಮಕೂರಿನ ಮಹಾನಗರ ಪಾಲಿಕೆ ಬಳಿ CITU ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ CITU ಸಂಸ್ಥೆಯ ಜಿಲ್ಲಾಧ್ಯಕ್ಷ ಸಯ್ಯದ್‌ ಮುಜೀಬ್‌, CITU ಕಾರ್ಯದರ್ಶಿ, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಅಮಾಲಿಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ CITU ಜಿಲ್ಲಾದ್ಯಕ್ಷ ಸಯ್ಯದ್‌ ಮುಜೀಬ್‌. ಎಲ್ಲಾ ವರ್ಗದವರು ಜನರು ಆಚರಿಸುವಂತಹ ದಿನವೇ ಕಾರ್ಮಿಕರ ದಿನಾಚರಣೆ ಆಗಿದೆ. 8 ಗಂಟೆ ದುಡಿಮೆ, 8 ಗಂಟೆ ಸಾಮಾಜಿಕ ಜೀವನ, 8 ಗಂಟೆ ವಿಶ್ರಾಂತಿ ಜೀವನ ಈ ಸೂತ್ರವನ್ನು ಕಾರ್ಮಿಕರು ಪಾಲಿಸಬೇಕು ಎಂದು ತಿಳಿಸಿದ್ರು. ಇನ್ನು ಬಂಡವಾಳಿ ಶಾಹಿಗಳು 8 ಗಂಟೆ ದುಡಿಮೆಯನ್ನು 12 ಗಂಟೆ ಮಾಡಲು ಹೊರಟಿದೆ. ಹೀಗಾಗಿ 8 ಗಂಟೆಯ ದುಡಿಯುವ ಅವಧಿಯನ್ನು ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದ್ರು. ಅಲ್ದೇ ದುಡಿಸಿಕೊಳ್ಳುವವರಿಗೆ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೊಡಬೇಕು ಎಂದು ತಿಳಿಸಿದರು.

ಇನ್ನು ಕಾರ್ಮಿಕರ ದಿನಾಚರಣೆ ಅಂಗವಾಗಿ CITU ವತಿಯಿಂದ ಕಾರ್ಮಿಕರಿಗೆ ಕ್ರಿಕೇಟ್‌ ಟೂರ್ನಿಮೆಂಟ್‌ನನ್ನು ಆಯೋಜನೆ ಮಾಡಲಾಗಿದ್ದು, ಸುಮಾರು 11 ತಂಡ ಭಾಗವಹಿಸಿದ್ದವು. ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಿ, ಸನ್ಮಾನ ಮಾಡಲಾಯಿತು. 

Author:

...
Keerthana J

Copy Editor

prajashakthi tv

share
No Reviews