500 ಕೋಟಿ ಕಲೆಕ್ಷನ್‌ ಮಾಡಿದ ಛಾವಾ ಮೂವಿ

2025ರಲ್ಲಿ ಛಾವ ಸಿನಿಮಾಗೆ ಅತಿದೊಡ್ಡ ಸಕ್ಸಸ್‌ ಸಿಕ್ಕಿದೆ. ಸದ್ಯ ದೇಶದ ಸಿನಿಮಾ ಮಂದಿರಗಳಲ್ಲಿ ಬಾಲಿವುಡ್​ನ ಛಾವ ಸಿನಿಮಾ ಅಬ್ಬರ ಜೋರಾಗಿದೆ. ಫೆಬ್ರವರಿಯಲ್ಲಿ ತೆರೆಗೆ ಬಂದಿದ್ದ ಛಾವಾ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮುಂತಾದವರು ನಟಿಸಿದ ಛಾವಾ ಸಿನಿಮಾ ತೆರೆಕಂಡು 24 ದಿನಗಳು ಕಳೆದಿದ್ದರೂ ಕೂಡ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ.  2025ರಲ್ಲಿ ರಿಲೀಸ್ ಆಗಿರುವ ಮೂವಿಗಳ ಪೈಕಿ ಛಾವಾ ಸಿನಿಮಾ 500 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದ ಮೊದಲ ಸಿನಿಮಾವಾಗಿದೆ.

ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ಛಾವಾ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ. ವಿಕ್ಕಿಕೌಶಲ್ ಅವರ ಅಭಿನಯಕ್ಕೆ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. ಛಾವಾ ಸಿನಿಮಾವು ಛತ್ರಪತಿ ಶಿವಾಜಿಯ ಪುತ್ರ ಸಾಂಬಾಜಿ ಮಹಾರಾಜ್​ರ ಕುರಿತಾಗಿದ್ದಾಗಿದೆ. ಸಿನಿಮಾದಲ್ಲಿ ಅವರ ಪತ್ನಿ ಯೇಸುಭಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಷಯ್ ಖನ್ನಾ, ಔರಂಗಾಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಲಕ್ಷ್ಮಣ್ ಉಠೇಕರ್. ಸಿನಿಮಾಕ್ಕೆ ದಿನೇಶ್ ವಿಜಯನ್ ನಿರ್ಮಾಣ ಮಾಡಿದ್ದಾರೆ.

 

 

Author:

...
Sub Editor

ManyaSoft Admin

Ads in Post
share
No Reviews