ನವದೆಹಲಿ :
ಭಾರತ ಪಾಕ್ ಯುದ್ದದಿಂಧ ಉತ್ತರ ಭಾರತದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿತ್ತು. ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಯುದ್ದದ ಭೀತಿಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ ಭಾರತದ ವಿವಿಧ ವಿಮಾನ ನಿಲ್ದಾಣಗಳನ್ನು ಮೇ 15ರ ವರೆಗೆ ಬಂದ್ ಮಾಡಲು ಆದೇಶಿಸಿತ್ತು.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡ ಹಿನ್ನಲೆ ಇಂದು ಕೇಂದ್ರ ಸರ್ಕಾರ ಉತ್ತರ ಭಾರತದಲ್ಲಿ ಬಂದ್ ಆಗಿದ್ದ 32 ಏರ್ ಪೋರ್ಟ್ ಗಳನ್ನು ತಕ್ಷಣವೇ ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ವಿಮಾನಯಾನ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಿಸಿದೆ.