ತುಮಕೂರು : ಕೆರೆಯಲ್ಲಿ ಮಣ್ಣು ಕದಿಯುತ್ತಿದ್ದವರ ಮೇಲೆ ಬಿತ್ತು ಕೇಸ್ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ತುಮಕೂರು :

ಜನರ ಸಮಸ್ಯೆಗಳು, ಅಕ್ರಮಗಳು, ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸವನ್ನು ನಿಮ್ಮ ಪ್ರಜಾಶಕ್ತಿ ಟಿವಿ ಆರಂಭದಿಂದಲೂ ಮಾಡುತ್ತಲೇ ಬಂದಿದೆ. ಅದರಂತೆ ಇಂದು ತುಮಕೂರು ಜನರ ನಾಡಿಮಿಡಿತವಾಗಿ ಪ್ರಜಾಶಕ್ತಿ ಜನಮನ್ನಣೆಗೆ ಪಾತ್ರವಾಗಿದೆ, ಕಳೆದ ಫೆಬ್ರವರಿ 13 ರಂದು ಹೆಬ್ಬೂರಿನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಲೇಔಟ್‌ಗಳಿಗೆ ಸಾಕಾಣಿಕೆ ಮಾಡ್ತಾ ಇರೋ ಬಗ್ಗೆ ಸಾಕ್ಷಿ ಸಮೇತ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಎಚ್ಚರಗೊಂಡಿದ್ದು ಮಣ್ಣು ಸಾಕಾಣಿಕೆಗೆ ಬ್ರೇಕ್‌ ಹಾಕಿದ್ದರ ಜೊತೆಗೆ ಮಣ್ಣು ಕದಿಯುತ್ತಿದ್ದವರ ಮೇಲೆ ಎಫ್‌ಐಆರ್‌ ದಾಖಲು ಮಾಡಿದೆ. ಇದರಿಂದ ಪ್ರಜಾಶಕ್ತಿ ವರದಿಗೆ ನ್ಯಾಯ ಸಿಕ್ಕಂತಾಗಿದೆ.

ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನೆ ಅಕ್ರಮವಾಗಿ ಮಣ್ಣನ್ನ ಲೇಔಟ್ ಗಳಿಗೆ ಸಾಗಿಸುತ್ತಿದ್ದರು. ಈ ಮಣ್ಣು ಸಾಗಾಟಕ್ಕೆ ಇಲಾಖೆಯಿಂದಾಗಲಿ ಯಾವುದೇ ಪರ್ಮಿಷನ್‌ ಕೂಡ ತೆಗೆದುಕೊಂಡಿರಲಿಲ್ಲ. ಈ ಬಗ್ಗೆ ಮಾಹಿತಿ ಸಿಕ್ತಾ ಇದ್ದಂತೆ ಸ್ಥಳಕ್ಕೆ ಹೋದ ಪ್ರಜಾಶಕ್ತಿ ಟೀಂ ಕೆರೆಯಲ್ಲಿ ಆಗ್ತಿದ್ದ ಅನ್ಯಾಯವನ್ನು ಪ್ರಶ್ನೆ ಮಾಡಿದ್ದಲ್ಲದೇ, ವರದಿ ಮಾಡುವ ಮೂಲಕ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ಮಾಡಿತ್ತು. ನಿಮ್ಮ ಪ್ರಜಾಶಕ್ತಿ ಸುದ್ದಿ ಮಾಡಿ ಸ್ವಲ್ಪ ದಿನದಲ್ಲೇ ಎಚ್ಚೆತ್ತುಕೊಂಡ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರಜಾಶಕ್ತಿ ಟಿವಿಯ ವಿಡಿಯೋವನ್ನು ಆಧಾರ ವಾಗಿಟ್ಟುಕೊಂಡು ಅಕ್ರಮ ಮಣ್ಣು ಸಾಕಾಣಿಕೆ ಮಾಡಿದವರ ಮೇಲೆ ಎಫ್‌ಐಆರ್‌ ದಾಖಲು ಮಾಡಿದ್ದು, ಮಣ್ಣು ಸಾಕಾಣಿಕೆಗೆ ಬ್ರೇಕ್‌ ಹಾಕಿದಂತಾಗಿದೆ.

ಇನ್ನು ಅಕ್ರಮ ಮಣ್ಣು ಸಾಕಾಣಿಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರೋ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ತಿಪ್ಪೇಸ್ವಾಮಿ, ಪ್ರಜಾಶಕ್ತಿ ಟಿವಿಯ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ದೂರು ದಾಖಲಿಸಿಕೊಂಡಿದ್ದೇವೆ. ಈ ಪ್ರಕರಣದಲ್ಲಿ ಹೆಬ್ಬೂರು ಪೊಲೀಸ್‌ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರು. ಅದಕ್ಕಾಗಿ ನಾವು ತಡವಾಗಿ FIR ದಾಖಲು ಮಾಡಿದ್ದೇವೆ. ಜೊತೆಗೆ ಈ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೂ ತಂದಿದ್ದು, ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಒಟ್ಟಿನಲ್ಲಿ, ವರದಿ ಮಾಡಿ ಕೆಲ ದಿನಗಳ ಬಳಿಕ ಅಂತೂ ಇಂತೂ ಮಣ್ಣು ಕದಿಯುತ್ತಿದ್ದವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅದೇನೆ ಇರಲಿ ಸರ್ಕಾರಿ ಜಮೀನು, ಕೆರೆಗಳಲ್ಲಿ ಮಣ್ಣು ಕದಿಯುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ದೂರು ತೆಗೆದುಕೊಳ್ಳಲು ಪೊಲೀಸರು ವಿಳಂಬ ಮಾಡಿದ್ದು ಮಾತ್ರ ಬೇಸರದ ಸಂಗತಿ.. ಇನ್ನಾದ್ರು ಪೊಲೀಸರು ಈ ಬಗ್ಗೆ ಕ್ರಮ ತಗೆದುಕೊಂಡು ತನಿಖೆಯನ್ನು ಚುರುಕುಗೊಳಿಸಿ ಅಕ್ರಮ ಮಣ್ಣು ಸಾಗಾಟ ಮಾಡ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮಣ್ಣು ಕಳ್ಳರಿಗೆ ಎಚ್ಚರಿಕೆ ನೀಡಬೇಕಿದೆ.

Author:

share
No Reviews